ಕನ್ನಡಿಗರ ಜೀವನಾಡಿ KRS ಜಲಾಶಯ ಭರ್ತಿ: ಡಿಕೆಶಿ ಭೇಟಿ.. ಕಾವೇರಿ ಆರತಿಗೆ ಹೊಸ ಯೋಜನೆ

ಕನ್ನಡಿಗರ ಜೀವನಾಡಿ KRS ಜಲಾಶಯ ಭರ್ತಿ 
ಇಂದು KRSಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ
ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯ

Share this Video
  • FB
  • Linkdin
  • Whatsapp

ಇಂದು ಕೆಆರ್‌ಎಸ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar )ಭೇಟಿ ನೀಡಿ ಭರ್ತಿಯಾಗಿರುವ ಕನ್ನಂಬಾಡಿ ಅಣೆಕಟ್ಟೆ ವೀಕ್ಷಣೆ ಮಾಡಿದರು. ಮಂಡ್ಯ(Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂಗೆ (KRS Dam) ಭೇಟಿ ನೀಡಿದ್ದಾರೆ. ಡ್ಯಾಂ ವೀಕ್ಷಣೆ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಾವೇರಿ(Cauvery) ಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ಆರತಿಗೆ ಹೊಸ ಯೋಜನೆ ರೂಪಿಸಿದ್ದೇವೆ. ಧಾರ್ಮಿಕ ದತ್ತಿ, ನೀರಾವರಿ ಇಲಾಖೆಯಿಂದ ಕಾವೇರಿ ಆರತಿ ಬೃಂದಾವನಕ್ಕೆ ಹೊಸರೂಪಕ್ಕೂ ಸರ್ಕಾರಕ್ಕೆ ಮನವಿ ಬಂದಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಮಾಡಲಾಗುವುದು ಎಂದು ಮಂಡ್ಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಕಳೆದ ವಾರ ಒಂದು ಅಸ್ತ್ರ, ಈ ವಾರ ಇನ್ನೊಂದು ಅಸ್ತ್ರ: ಕಲಾಪದಲ್ಲಿ ಮಳೆ ಹಾನಿ ಬಗ್ಗೆ ಆದ್ಯತೆ ನೀಡಲು ಬಿಜೆಪಿ ತೀರ್ಮಾನ

Related Video