Asianet Suvarna News Asianet Suvarna News

ಕೊಪ್ಪಳ : ಸೇನೆಯಿಂದ ನಿವೃತ್ತಿ ಆಗಿ ಬಂದ ಯೋಧನಿಗೆ ಹೃದಯಸ್ಪರ್ಶಿ ಸ್ವಾಗತ

Jul 5, 2021, 3:46 PM IST

ಕೊಪ್ಪಳ (ಜು. 05): ಸೇನೆಯಿಂದ ನಿವೃತ್ತಿ ಆಗಿ ಬಂದ ಯೋಧನಿಗೆ ಹುಲಗಿಯ ರೈಲ್ವೇ ನಿಲ್ದಾಣದಲ್ಲಿ ಹೃದಯಸ್ಪರ್ಶಿ ಸ್ವಾಗತ ಕೋರಲಾಯಿತು. 

ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದ ಯೋಧ ಗುರುರಾಜ ದೇಶಪಾಂಡೆ ಕಳೆದ 24 ವರ್ಷಗಳಿಂದ ಜಮ್ಮು ಕಾಶ್ಮೀರ,ಪಂಜಾಬ್, ಲೇಹ್ ಲಡಾಕ್, ಹಿಮಾಚಲ ಪ್ರದೇಶ,ಆರುಣಾಚಲ ಪ್ರದೇಶ ಸೇರಿದಂತೆ ವಿವಿದೆಡೆ ಸೇವೆ ಸಲ್ಲಿಸಿದ್ದಾರೆ. 1997 ರಲ್ಲಿ ಮರಾಠ ರೆಜಿಮೆಂಟ್ ಗೆ ಸೇರಿದ್ದರು ಗುರುರಾಜ್ ದೇಶಪಾಂಡೆ.  ಕಳೆದ ಐದು ದಿನಗಳ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿರುವ ಯೋಶ ಗುರುರಾಜ ದೇಶಪಾಂಡೆ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.  ತೆರೆದ ವಾಹನದಲ್ಲಿ ಗುರುರಾಜ್ ಅವರನ್ನು ರೈಲ್ವೇ ನಿಲ್ದಾಣದಿಂದ ಮನೆಗೆ ಕರೆದುಕೊಂಡು ಬರಲಾಯಿತು. ಈ ವೇಳೆ ಪುಷ್ಟವೃಷ್ಠಿ ಸುರಿಸಿ ಸ್ವಾಗತಿಸಲಾಯಿತು.