Asianet Suvarna News Asianet Suvarna News

ಬರದ ನಡುವೆ ಅನ್ನದಾತನಿಗೆ ಬರ ಸಿಡಿಲು: 3 ವರ್ಷದಿಂದ ಬಂಡವಾಳ ಬಾರದೇ ರೋಸಿ ಹೋದ ರೈತ

ಆ ಭಾಗದ ರೈತರೂ ವಿಪರೀತ ಬರದಿಂದ ತತ್ತರಿಸಿ ಹೋಗಿದ್ದಾರೆ.ಸಾಲಸೋಲ ಮಾಡಿ ಹಾಕಿರೋ ಬೆಳೆಗಳಿಗೆ ರೋಗ ಆವರಿಸಿ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ.ಇದರ ನಡುವೆ ತರಕಾರಿಗಳ ಸಹವಾಸವೇ ಬೇಡ ಎಂದು ಹೂ ಬೆಳೆದ ಹಾಕಿದ ತಪ್ಪಿದೆ,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
 

ಹೆಚ್ಚಾಗಿ ತರಕಾರಿಯನ್ನೇ ಬೆಳೆಯುವ ಕೋಲಾರ(Kolar) ರೈತರು (Farmers)ಕಳೆದ ಎರಡು ಮೂರು ವರ್ಷಗಳಿಂದ ಬಂಡವಾಳ ಬಾರದೇ ರೋಸಿ ಹೋಗಿದ್ದಾರೆ. ಹಾಕಿದ ಬಂಡವಾಳ ಆದ್ರೂ ಬರಲಿ ಎಂದು ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭಕ್ಕಾಗಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ, ಚೆಂಡು ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದಾರೆ. ಆದ್ರೆ, ಬೆಲೆ ಕೇಳಿ ರೈತರು ತಮ್ಮ ತೋಟದಲ್ಲೇ ಬೆಳೆ ಬುಡ ಸಮೇತ ಕಿತ್ತು ಹಾಕಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕೊಂಚ ಬೆಲೆ ಬಂದ್ರೆ ಈಗ ಪಿತೃ ಪಕ್ಷ ಆಗಿರೋದ್ರಿಂದ ಯಾವುದೇ ಸಭೆ, ಸಮಾರಂಭಗಳಿಲ್ಲದೆ ಹೂ ವ್ಯಾಪಾರ ಆಗುತ್ತಿಲ್ಲ. ಹೂಗಳಿಗೂ(Flowers) ಡಿಮ್ಯಾಂಡ್‌ ಕಡಿಮೆ ಆಗಿದೆ. ವ್ಯಾಪಾರವಿಲ್ಲದೇ ಹೂಗಳು ಒಣಗಿ ಹೋಗ್ತಿರೋದ್ರಿಂದ ರೈತರ ಬಳಿ ಖರೀದಿ ಮಾಡೋದಕ್ಕೆ ವ್ಯಾಪಾರಸ್ಥರು ಧೈರ್ಯ ಮಾಡ್ತಿಲ್ಲ.ಕೆಲ ದಿನಗಳ ಹಿಂದೆ ಇದ್ದ ಬೆಲೆಯಲ್ಲಿ ಶೇ.90 ರಷ್ಟೂ ಬೆಲೆ ಕುಸಿತವಾಗಿದೆ. ಗುಲಾಬಿ ಹೂ ಕೆಜಿ 10 ರುಪಾಯಿ, ಸೇವಂತಿಗೆ ಕೆಜಿ 10 ರುಪಾಯಿ, ಚಂಡು ಹೂ ಕೆಜಿ 4 ರುಪಾಯಿಗೆ ಮಾರಾಟವಾಗ್ತಿದ್ದು, ಹಾಕಿರುವ ಬಂಡವಾಳವೂ ಬಾರದೇ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ವೀಕ್ಷಿಸಿ:  ಹಳೇ ವೈಷಮ್ಯಕ್ಕೆ ಬಲಿಯಾದ ಚಿನ್ನದಂತ ಫಸಲು: ಬೆಳೆದ ಬೆಳೆ ಕೈಸೇರಲಿಲ್ಲ ಎಂದು ಅನ್ನದಾತ ಅಳಲು..!

Video Top Stories