ನಂದಿನಿ ಹಾಲಿನ ಬೆಲೆ ಹೆಚ್ಚಳ: ಕಾಫಿ-ಟೀ ಹಾಗೂ ಉಪಹಾರದ ಮೇಲೆ ಎಫೆಕ್ಟ್

ಕೆಎಂಎಫ್ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಿದ ಬೆನ್ನಲ್ಲೇ, ಹೋಟೆಲ್‌ಗಳಲ್ಲಿ ಕಾಫಿ, ಟೀ ಹಾಗೂ ಉಪಹಾರದ ಬೆಲೆ ಹೆಚ್ಚಳವಾಗಿದೆ.
 

Share this Video
  • FB
  • Linkdin
  • Whatsapp

ಹಾಲಿನ ದರ ಏರಿಕೆಯ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ ಉಂಟಾಗಿದ್ದು, ಹೋಟೆಲ್‌ಗಳಲ್ಲಿ ಕಾಫಿ, ಟೀ ಹಾಗೂ ಉಪಹಾರದ ಬೆಲೆ ಹೆಚ್ಚಳ ಮಾಡಲಾಗಿದೆ. ನಿನ್ನೆ ಹೋಟೆಲ್‌ಗಳಲ್ಲಿ ದರ ಹೆಚ್ಚಳವಿಲ್ಲ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್‌ ಸ್ಪಷ್ಟನೆ ನೀಡಿದ್ದರು. ಆದರೆ ಇದರ ನಡುವೆಯೇ ಹೋಟೆಲ್‌ ಮಾಲೀಕರು ದರ ಹೆಚ್ಚಳ ಮಾಡಿದ್ದಾರೆ. ಹೋಟೆಲ್‌ ಮುಂಭಾಗ ದರ ಹೆಚ್ಚಳದ ಫಲಕವೂ ಅಳವಡಿಕೆ ಮಾಡಲಾಗಿದೆ. ಚಾಮರಾಜಪೇಟೆಯ ಬೈ ಟು ಕಾಫಿ ಹೋಟೆಲ್‌ ಮುಂಭಾಗ ಕಾಫಿ ಹಾಗೂ ದೋಸೆಯ ದರ ಹೆಚ್ಚಿಸಿದ್ದೇವೆ, ಗ್ರಾಹಕರು ಸಹಕರಿಸುವಂತೆ ಮನವಿಯ ಬೋರ್ಡ್ ಹಾಕಲಾಗಿದೆ.

ಇಸ್ಲಾಂ, ಕ್ರೈಸ್ತ ರಾಷ್ಟ್ರವಾಗಿಸಲು ಹಿಂದು ಸಮಾಜ ಬಿಡಲ್ಲ: ಯತ್ನಾಳ್

Related Video