ಇಸ್ಲಾಂ, ಕ್ರೈಸ್‌್ತ ರಾಷ್ಟ್ರವಾಗಿಸಲು ಹಿಂದು ಸಮಾಜ ಬಿಡಲ್ಲ ಶಾಸಕ ಅಮೃತ ದೇಸಾಯಿ ಉಳವಿ ಪಾದಯಾತ್ರೆಗೆ ಯತ್ನಾಳ ಚಾಲನೆ

ಧಾರವಾಡ (ನ.25) : ಭಾರತವನ್ನು ಇಸ್ಲಾಂ ಅಥವಾ ಕ್ರೈಸ್‌್ತ ಧರ್ಮ ರಾಷ್ಟ್ರವಾಗಿಸುವ ಹುನ್ನಾರ ನಡೆದಿದೆ. ಇದಕ್ಕೆ ಹಿಂದು ಸಮಾಜ ಆಸ್ಪದ ಕೊಡಲ್ಲ. ಟಿಪ್ಪು, ಮೊಘಲ ವಂಶಸ್ಥರು ಈಗ ಎಲ್ಲಿದ್ದಾರೆ? ಆಟೋ ಚಾಲಕರು, ಪಾನ್‌ವಾಲಾ ಆಗಿದ್ದಾರೆ ಎಂದು ಶಾಸಕ ಬಸವನಗೌಡ ಯತ್ನಾಳ ಲೇವಡಿ ಮಾಡಿದರು.

ಶಾಸಕ ಅಮೃತ ದೇಸಾಯಿ ಅವರ ಗರಗ ಮಡಿವಾಳೇಶ್ವರ ದೇವಸ್ಥಾನದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನ ವರೆಗಿನ ಪಾದಯಾತ್ರೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಬಳಿಕ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ್‌ ಸಿಂಹ, ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕಾಲಕಾಲಕ್ಕೆ ಜನಿಸಿದ್ದು, ಇಂತಹ ಹೋರಾಟಗಾರರಿಂದಲೇ ಹಿಂದು ಧರ್ಮ ಇಂದಿಗೂ ಜೀವಂತಿವಿದೆ ಎಂದರು.

Karnataka Politics: ಶಾಸಕ ಯತ್ನಾಳ್ ವಿರುದ್ದ ಭುಗಿಲೆದ್ದ ಆಕ್ರೋಶ, ಸತೀಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ

ಭಾರತ ಶರಣರ ನಾಡು. ಅನ್ನ-ಅಕ್ಷರ ದಾಸೋಹಕ್ಕೆ ಹೆಸರಾದ ಬೀಡು. ಲಿಂಗಾಯತ-ವೀರಶೈವ ಮಠಗಳು ಎಂದಿಗೂ ಜಾತಿ-ಭೇದ ಮಾಡಲಿಲ್ಲ. ಸಾಧು-ಸಂತರು ಹಾಗೂ ಸತ್ಪುರುಷರಿಂದ ಧರ್ಮ, ಸಂಸ್ಕೃತಿ ಉಳಿದಿದೆ ಎಂದರು.

ಈ ವೇಳೆ ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ವಿವಿಧ ಮಠಗಳ ಶಂಕರ ಆಚಾರ್ಯರು, ಶಾಂತಲಿಂಗ ಶಿವಾಚಾರ್ಯರು, ಶಿವಬಸವ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ, ಪಂಚಾಕ್ಷರ ಸ್ವಾಮೀಜಿ, ರಾಚೋಟೇಶ್ವರ ಸ್ವಾಮೀಜಿ, ಮುರುNೕಂದ್ರ ಸ್ವಾಮೀಜಿ, ಶಾಸಕರಾದ ಅರವಿಲ್ಲ ಬೆಲ್ಲದ, ಅಮೃತ ದೇಸಾಯಿ, ಮಾಜಿ ಶಾಸಕರಾದ ಎ.ಬಿ. ದೇಸಾಯಿ, ಸೀಮಾ ಮಸೂತಿ, ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಅಶೋಕ ದೇಸಾಯಿ, ರುದ್ರಪ್ಪ ಅರಿವಾಳ, ಅಡಿವೆಪ್ಪ ಹೊನ್ನಪ್ಪನವರ, ಎಚ್‌.ಡಿ. ಪಾಟೀಲ, ಮಹೇಶ ಯಲಿಗಾರ, ನಾಗನಗೌಡ ಪಾಟೀಲ, ದಯಾನಂದ ಪಾಟೀಲ ಇದ್ದರು.

ಬಸನಗೌಡ ಪಾಟೀಲ ಯತ್ನಾಳ್‌-ಅರುಣ್‌ ಸಿಂಗ್‌ ರಹಸ್ಯ ಮಾತುಕತೆ