ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ ಕೊರೊನಾ ಸೋಂಕು..!
ಹುಬ್ಬಳ್ಳಿ. ಕಿಮ್ಸ್ ಸ್ವಾಬ್ ಟೆಸ್ಟ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುವ ಬಹುತೇಕ ಶಂಕಿತರ ವರದಿ ಪಾಸಿಟಿವ್ ಬರುತ್ತಿದೆ. ಗಂಟಲು ದ್ರವ ಸಂಗ್ರಹಿಸುವ ಕೇಂದ್ರವೇ ಸೋಂಕಿನಿಂದ ಕಲುಷಿತಗೊಂಡಿದೆ ಎಂಬ ಕಾರಣಕ್ಕೆ ಆರು ದಿನಗಳ ಕಾಲ ಸ್ವಾಬ್ ಸಂಗ್ರಹ ನಿಲ್ಲಿಸಲಾಗಿದ್ದು, ಶಂಕಿತರು ಪರದಾಡುವಂತಾಗಿದೆ.
ಹುಬ್ಬಳ್ಳಿ(ಜು.22): ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ ಕೊರೊನಾ ಸೋಂಕು ಹರಡುತ್ತಿವೆಯಾ? ಹೌದು ಇಂತಹದೊಂದು ಗಂಭೀರ ಆರೋಪ ಈಗ ಸ್ವಾಬ್ ಟೆಸ್ಟ್ ಸೆಂಟರಗಳಿಂದಲೇ ಕೇಳಿ ಬರುತ್ತಿದೆ.
ಹುಬ್ಬಳ್ಳಿ ಕಿಮ್ಸ್ ಸ್ವಾಬ್ ಟೆಸ್ಟ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುವ ಬಹುತೇಕ ಶಂಕಿತರ ವರದಿ ಪಾಸಿಟಿವ್ ಬರುತ್ತಿದೆ. ಗಂಟಲು ದ್ರವ ಸಂಗ್ರಹಿಸುವ ಕೇಂದ್ರವೇ ಸೋಂಕಿನಿಂದ ಕಲುಷಿತಗೊಂಡಿದೆ ಎಂಬ ಕಾರಣಕ್ಕೆ ಆರು ದಿನಗಳ ಕಾಲ ಸ್ವಾಬ್ ಸಂಗ್ರಹ ನಿಲ್ಲಿಸಲಾಗಿದ್ದು, ಶಂಕಿತರು ಪರದಾಡುವಂತಾಗಿದೆ.
ಆಂಬ್ಯುಲೆನ್ಸ್ ಇಟ್ಟುಕೊಂಡು ಬಿಬಿಎಂಪಿ ಚೆಲ್ಲಾಟ..!
ಅಚ್ಚರಿಯಾದ್ರೂ ಇದು ಸತ್ಯ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸುವವರಿದ್ದರೆ. ಸ್ವಲ್ಪ ಮುಂದೂಡಿ.ಯಾಕಂದ್ರೆ ಸ್ವಾಬ್ ಸಂಗ್ರಹಿಸುವ ಪರೀಕ್ಷಾ ಕೇಂದ್ರವೇ ಕೊರೊನಾ ಸೋಂಕಿನಿಂದ ಕಲುಷಿತಗೊಂಡಿದೆಯಂತೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.