ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹ: ಕ್ರಷರ್‌ ಕ್ವಾರಿಗಳು ಬಂದ್‌

ಕ್ರಷರ್‌ ಕ್ವಾರಿಗಳು ಕಳೆದ ಮೂರು ದಿನಗಳಿಂದ ಬಂದ್‌ ಆಗಿದ್ದು, ನೀವು ಮನೆ ಕಟ್ಟಸ್ತಿದ್ದರೆ ಈ ಸ್ಟೋರಿ ನೋಡಿ. ಯಾಕಂದ್ರೆ ಕಟ್ಟಡ ಸಾಮಾಗ್ರಿ ಸಿಗದೆ ಕಾಮಗಾರಿ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.

Share this Video
  • FB
  • Linkdin
  • Whatsapp

ರಾಜ್ಯದ ಕ್ರಷರ್‌ ಕ್ವಾರಿಗಳು ಕಳೆದ ಮೂರು ದಿನಗಳಿಂದ ಬಂದ್‌ ಆಗಿವೆ. ಕರ್ನಾಟಕ ಕ್ವಾರಿ ಅಸೋಸಿಯೇಷನ್‌'ನಿಂದ ಕ್ರಷರ್‌ ಬಂದ್‌ಗೆ ನಿರ್ಧಾರಿಸಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗಣಿ ಮಾಲೀಕರಿಂದ ಬಂದ್‌ ಮಾಡಲಾಗಿದೆ. ಮೆಟ್ರೋ ಕಾಮಗಾರಿಗೂ ಕ್ರಷರ್‌ ಮಾಲೀಕರ ಬಂದ್‌ ಎಫೆಕ್ಟ್‌ ತಟ್ಟುತ್ತಾ ಎಂಬ ಪ್ರಶ್ನೆ ಮೂಡಿದೆ.ಜಲ್ಲಿ ಹಾಗೂ ಎಂಸ್ಯಾಂಡ್‌ ಸಾಗಾಣೆ ಸ್ಥಗಿತಕ್ಕೆ ನಿರ್ಧರಿಸಿರುವ ಕ್ರಷರ್‌ ಮಾಲೀಕರು, ಸರ್ಕಾರಿ ಕಾಮಗಾರಿಗಳಿಗೂ ಕಟ್ಟಡ ಸಾಮಾಗ್ರಿ ಪೂರೈಸದಿರಲು ನಿರ್ಧಾರಿಸಿದ್ದಾರೆ. ಎರಡ್ಮೂರು ದಿನಗಳಲ್ಲಿ ಕಟ್ಟಡ ಸಾಮಾಗ್ರಿಗಳಿಗೆ ಹಾಹಾಕಾರ ಶುರುವಾಗಲಿದೆ. ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹಿಸಿದ್ದಾರೆ.

Related Video