ಹಿರೇಕೆರೂರು ಸೀಲ್ ಡೌನ್ ಮಾಡಿ; ಸಚಿವ ಬಿಸಿ ಪಾಟೀಲ್ ಮನವಿ

ಹಿರೇಕೆರೂರು ಸೀಲ್ಡೌನ್ ಮಾಡಲು ಬಿ.ಸಿ.ಪಾಟೀಲ್ ಮನವಿ/  ಕೊರೋನಾ ಮಹಾಮಾರಿ ಅಟ್ಟಹಾಸ/ ಕೊರೋನಾ ನಿಯಮಗಳ ಪಾಲನೆಗೆ ಮನವಿ/ ಅನಾರೋಗ್ಯ ಕಂಡುಬಂದರೆ ಕೂಡಲೆ ತಪಾಸಣೆ ಮಾಡಿಸಿಕೊಳ್ಳಿ

First Published Jun 30, 2020, 4:23 PM IST | Last Updated Jun 30, 2020, 4:30 PM IST

ಹಾವೇರಿ(ಜೂ.30) ಹಿರೇಕೆರೂರು ಕ್ಷೇತ್ರದಲ್ಲಿ ಕೊರೊನಾ ಮಹಾಮಾರಿ ಲಗ್ಗೆಯಿಟ್ಟಿದ್ದು, ಹಿರೇಕೆರೂರನ್ನು ಸೀಲ್ಡೌನ್ ಮಾಡುವಂತೆ ಕೃಷಿ ಸಚಿವ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ

ಕೊರೊನಾದಿಂದ ಬಚಾವ್ ಆಗಲು ಸಾಮಾಜಿಕ ಅಂತರ ಕಡ್ಡಾಯ ಮಾಸ್ಕ್ ಧರಿಸುವುದರ ಜೊತೆಗೆ ಜನತೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ. 

ಗಿರಿಧಾಮಗಳ ಪ್ರವಾಸಕ್ಕೆ ನಿರ್ಬಂಧ

ಕ್ಷೇತ್ರದ ಗ್ರಾಮೀಣ ಭಾಗಗಳಾದ ಗುಡ್ಡದಮಾದಾಪುರ,ಕೋಡ,ಸುತ್ಕೋಟೆ,ಎಮ್ಮಿಗನೂರು ಸೇರಿದಂತೆ ವಿವಿಧ ಭಾಗಗಳಿಗೂ ವ್ಯಾಪಿಸಿದೆ. ಜನತೆ ಆದಷ್ಟು ಎಚ್ಚೆತ್ತುಕೊಂಡಿರಬೇಕು. ಯಾರಿಗಾದರೂ ಸೋಂಕು ತಗುಲಿದ ಶಂಕೆ ವ್ಯಕ್ತವಾದಲ್ಲಿ ಅಥವಾ ಶೀತ,ಜ್ವರ,ಕೆಮ್ಮಿನಂತಹ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆಗೊಳಪಡಬೇಕು.ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಎಂದು ತಿಳಿಸಿದ್ದಾರೆ. 

 

 

 


 

 

Video Top Stories