Asianet Suvarna News Asianet Suvarna News

ಗಿರಿಗಳ ಪ್ರದೇಶಕ್ಕೆ ಪ್ರವಾಸ ನಿರ್ಬಂಧ: ಜಿಲ್ಲಾಡಳಿತ ಸೂಚನೆ

ಲಾಕ್‌ ಡೌನ್‌ ಸಡಿಲಿಕೆಗೊಂಡ ಹಿನ್ನೆಲೆ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಏಕಾಏಕಿ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಬಾಬಾಬುಡನ್‌ ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಇನ್ನಿತರೇ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಜಿಲ್ಲೆಯ ಗಿರಿಗಳ ಪ್ರದೇಶಕ್ಕೆ ಪ್ರವಾಸ ಬರುವವರು ತಮ್ಮ ಕಾರ್ಯಕ್ರಮವನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Tourist prohibited in Mountain hills area in Chikkamagaluru
Author
Chikkamagaluru, First Published Jun 30, 2020, 3:51 PM IST

ಚಿಕ್ಕಮಗಳೂರು(ಜೂ.30): ಜಿಲ್ಲೆಯ ಗಿರಿಗಳ ಪ್ರದೇಶಕ್ಕೆ ಪ್ರವಾಸ ಬರುವವರು ತಮ್ಮ ಕಾರ್ಯಕ್ರಮವನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಬೇಕು ಅಥವಾ ಮೊಟಕುಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದ್ದಾರೆ.

ಕೋವಿಡ್‌-19 ಹತೋಟಿಗೆ ಬಂದ ನಂತರ ಪ್ರವಾಸ ಕೈಗೊಳ್ಳುವುದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅವಶ್ಯಕ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು, ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಿ ಸುಧಾರಿತವಾಗಿ ಪರಿಸ್ಥಿತಿಯನ್ನು ಎದುರಿಸುವುದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅವಶ್ಯಕ ಎಂದಿದ್ದಾರೆ.

ಚೀನಾದಲ್ಲಿ ಹುಟ್ಟಿಕೊಂಡಿದೆ ಮತ್ತೊಂದು ಡೆಡ್ಲಿ ವೈರಸ್: ಮನುಷ್ಯರಿಗೆಷ್ಟು ಮಾರಕ?

ಲಾಕ್‌ ಡೌನ್‌ ಸಡಿಲಿಕೆಗೊಂಡ ಹಿನ್ನೆಲೆ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಏಕಾಏಕಿ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಬಾಬಾಬುಡನ್‌ ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಇನ್ನಿತರೇ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ, ಮುಖಗವಸು ಹಾಕಿಕೊಳ್ಳದೇ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರವಾಸ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ತಿಳಿಸಿದ್ದಾರೆ.
 

Follow Us:
Download App:
  • android
  • ios