ಕೊರೋನಾ ಇನ್ನೂ ಹೋಗಿಲ್ಲ ಸ್ವಾಮಿ: ಬೆಳಗಾವಿ ಗಡಿಯಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ..!
* ಗಡಿಯಲ್ಲಿ ಅಧಿಕಾರಿಗಳ ಬೇಕಾಬಿಟ್ಟಿ ತಪಾಸಣೆ
* ಕೊರೋನಾ ಮೂರನೇ ಅಲೆ ಭೀತಿ ಈಗಲೇ ಶುರು
* ಜನರ ಬಿಂದಾಸ್ ಓಡಾಟ
ಬೆಳಗಾವಿ(ಜು.11): ಕೊರೋನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅನ್‌ಲಾಕ್ ಮಾಡಲಾಗಿದೆ. ಅದರೆ, ಕೊರೋನಾ ವೈರಸ್ ಇನ್ನೂ ಹೋಗಿಲ್ಲ. ಜನರು ಮಾತ್ರ ಫುಲ್ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚುತ್ತಿದ್ರೂ ಬೆಳಗಾವಿ ಗಡಿ ಭಾಗದಲ್ಲಿ ಜನರು ಮಾತ್ರ ಎಚ್ಚೆತ್ತುಕೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಗಡಿಯಲ್ಲಿ ಅಧಿಕಾರಿಗಳು ಬೇಕಾಬಿಟ್ಟಿ ತಪಾಸಣೆ ನಡೆಸುತ್ತಿದ್ದಾರೆ. ಇದರಿಂದ ಕೊರೋನಾ ಮೂರನೇ ಅಲೆ ಭೀತಿ ಈಗಲೇ ಶುರುವಾಗಿದೆ. ಇನ್ನು ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಸರ್ಕಾರ ಕೂಡ ನಿರ್ಲಕ್ಷ್ಯವಹಿಸಿದೆ.