Chikkamagaluru: ರಾಜ್ಯದ ಎರಡನೇ ಅತೀ ಉದ್ದದ ತೂಗುಸೇತುವೆ ಉದ್ಘಾಟನೆಗೆ ಸಿದ್ಧ
- ರಾಜ್ಯದ ಎರಡನೇ ಅತೀ ಉದ್ದದ ತೂಗುಸೇತುವೆ ಉದ್ಘಾಟನೆಗೆ ಸಿದ್ಧ
- ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದ ಹ್ಯಾಂಗಿಂಗ್ ಬ್ರಿಡ್ಜ್ ಮತ್ತೆ ರೆಡಿ
- ತೂಗುಸೇತುವೆ ತಜ್ಞ ಗಿರೀಶ್ ಭಾರಧ್ವಾಜ್‌ರಿಂದ ನಿರ್ಮಾಣಕಾರ್ಯ
ಚಿಕ್ಕಮಗಳೂರು (ನ. 13): 2019ರಲ್ಲಿ ಸುರಿದ ಮಹಾಮಳೆಗೆ ಎನ್.ಆರ್.ಪುರ ತಾಲೂಕಿನ ಕುಗ್ರಾಮ ಬಾಳೆಗದ್ದೆ ಸೇತುವೆ ಕೊಚ್ಚಿ ಹೋಗಿತ್ತು. ಸೇತುವೆ ಕೊಚ್ಚಿ ಹೋಗಿದ್ದರಿಂದ ಹಳ್ಳಿಗರು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದ್ದರು. ಮಕ್ಕಳು ಶಾಲೆಗೆ ಹೋಗಬೇಕೆಂದರೆ, ರೋಗಿಗಳು ಆಸ್ಪತ್ರೆಗೆ ಹೋಗಬೇಕೆಂದರೆ ಈ ಸೇತುವೆ ಮೂಲಕವೇ ಹೋಗಬೇಕು. ಸೇತುವೆ ಹೋದಾಗಿನಿಂದ ಈ ಕುಗ್ರಾಮದ ಜನ, ವಿದ್ಯಾರ್ಥಿಗಳು ಈ ಸಮಯದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಜಿಟಿಜಿಟಿ ಮಳೆ, ಮೈ ನಡುಗಿಸುವ ಚಳಿ, ಬೆಚ್ಚನೆ ಮಲಗಿದೆ ಸಿಲಿಕಾನ್ ಸಿಟಿ!
ಕೊನೆಗೆ ವಿಧಿಯಿಲ್ಲದೇ ಪ್ರಾಣದ ಹಂಗನ್ನ ತೊರೆದು ಬಿದಿರಿನ ತೆಪ್ಪದಲ್ಲಿ ಗ್ರಾಮದ ಪುಟಾಣಿಗಳು, ಜನರು 50-60 ಅಡಿ ಆಳವಿರುವ ಭದ್ರಾ ನದಿಯನ್ನ ದಾಟುತ್ತಿದ್ರು. ಆಮೇಲಾಮೇಲೆ ಅರಣ್ಯ ಇಲಾಖೆ ಬೋಟ್ ಮೂಲಕ ಜನರನ್ನ ದಡ ಮುಟ್ಟಿಸ್ತಿತ್ತು. ಇದೀಗ 2 ವರ್ಷದ ಬಳಿಕ ಸುಸಜ್ಜಿತ ತೂಗುಸೇತುವೆ ನಿರ್ಮಾಣವಾಗಿದೆ. ಎರಡು ವರ್ಷಗಳಿಂದ ಗ್ರಾಮಸ್ಥರು ಅನುಭವಿಸ್ತಿದ್ದ ಕಷ್ಟಕ್ಕೆ ಮುಕ್ತಿ ಸಿಕ್ಕಿದೆ. ಜೀವ ಕೈಯಲ್ಲಿಡಿದು ತೆಪ್ಪದಲ್ಲಿ ನದಿ ದಾಟುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡಿದೆ.