ಯಾದಗಿರಿ ಮೆಡಿಕಲ್ ಕಾಲೇಜು: ಸುವರ್ಣನ್ಯೂಸ್-ಕನ್ನಡಪ್ರಭ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಯಾದಗಿರಿ ಅತ್ಯಂತ ಹಿಂದುಳಿದ ಪ್ರದೇಶ ಅನ್ನೋ ಹಣೆ ಪಟ್ಟಿಕೊಂಡಿರೋ ಜಿಲ್ಲೆ. ಮೂಲ ಸೌಕರ್ಯ ವಂಚಿತ ಯಾದಗಿರಿಯ ಅಭಿವೃದ್ಧಿಗೆ ಸಿಎಂ ಕುಮಾರಸ್ವಾಮಿ ರೂಪುರೇಷೆ ಸಿದ್ಧಪಡಿಸ್ಬೇಕಾಗಿತ್ತು. ಆದ್ರೆ, ಇತ್ತೀಚೆಗೆ ಯಾದಗಿರಿ ಜಿಲ್ಲೆ ಗುರುಮಿಠ್ಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ಸಿಎಂ, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಒಪನ್ ಮಾಡಿದ್ರೆ ಹೊರಗಿನ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ, ಸ್ಥಳೀಯವಾಗಿ ಏನೂ ಪ್ರಯೋಜನವಿಲ್ಲ ಎಂದು ಹೇಳೋ ಮೂಲಕ ಜಿಲ್ಲೆಯ ಜನರ ಬಹುದಿನದ ಕನಸಿಗೆ ತಣ್ಣೀರು ಎರಚಿದರು. ಸಮಸ್ಯೆಯ ಗಂಭೀರತೆಯನ್ನು ಅರಿತ ‘ಕನ್ನಡ ಪ್ರಭ- ಸುವರ್ಣನ್ಯೂಸ್  ಸರಣಿ ವರದಿ ಮಾಡೋ ಮೂಲಕ, ಜನ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ. 

First Published Jul 2, 2019, 7:25 PM IST | Last Updated Jul 2, 2019, 7:25 PM IST