Asianet Suvarna News Asianet Suvarna News

ಕಾಮಾಕ್ಷಿಪಾಳ್ಯ ಪೊಲೀಸರು ಇನ್‌ಸ್ಟಾಗ್ರಾಂ ಕಂಪನಿಗೆ ಪತ್ರ ಬರೆದಿದ್ದೇಕೆ..? ಮೆಸೇಜ್ ರಿಟ್ರೀವ್‌ಗೆ ಪೊಲೀಸರ ಯತ್ನ


ಕೊಲೆಗೆ ಮೂಲ ಕಾರಣವೇ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ ಮೆಸೇಜ್
ಮೆಸೇಜ್ ಕಾರಣಕ್ಕೆ ಕೊಲೆ ಅಂತಾ ಹೇಳಿಕೆ ಕೊಟ್ಟಿದ್ದ ದರ್ಶನ್ ಗ್ಯಾಂಗ್
ಈ ಕಾರಣಕ್ಕೆ ಮೊಬೈಲ್ ಮಾಹಿತಿ ಹೊರತೆಗೆಯುವುದು ಅನಿವಾರ್ಯ

ದರ್ಶನ್ ಗ್ಯಾಂಗ್‌ನಿಂದ(Darshan) ರೇಣುಕಾಸ್ವಾಮಿ ಕೊಲೆ (Renukaswamy murder case) ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇನ್‌ಸ್ಟಾಗ್ರಾಂ (Instagram) ಕಂಪನಿಗೆ ಪತ್ರವನ್ನು(Letter) ಬರೆದಿದ್ದಾರೆ ಎಂಬ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರೇಣುಕಾಸ್ವಾಮಿ ಮೊಬೈಲ್ ಪತ್ತೆ ಹಚ್ಚಲು ಕಾಮಾಕ್ಷಿಪಾಳ್ಯ ಪೊಲೀಸರು ವಿಫಲರಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸರಿಗೆ(Kamakshipalya police) ರೇಣುಕಾಸ್ವಾಮಿ ಮೊಬೈಲ್ ಪತ್ತೆ ಹಚ್ಚುವುದು ತಲೆ ನೋವಾಗಿದೆ. ಮೊಬೈಲ್‌ನಲ್ಲಿನ ಮಾಹಿತಿಯನ್ನು ಹೊರತೆಗೆಯಲೇಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ. ಕೊಲೆಗೆ ಮೂಲ ಕಾರಣವೇ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ ಮೆಸೇಜ್ ಎಂದು ದರ್ಶನ್ ಗ್ಯಾಂಗ್ ಹೇಳಿದೆ. ಈ ಕಾರಣಕ್ಕೆ ಮೊಬೈಲ್ ಮಾಹಿತಿ ಹೊರತೆಗೆಯುವುದು ಅನಿವಾರ್ಯವಾಗಿದೆ.

ಇದನ್ನೂ ವೀಕ್ಷಿಸಿ:  ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನದಗಳಿಕೆಷ್ಟು? ಕಲಿಯುಗದೊಂದಿಗೆ ದ್ವಾಪರ ಯುಗದ ಬೆಸುಗೆ ಈ ‘ಕಲ್ಕಿ’!