ಮೋದಿ/ಸಿದ್ದರಾಮಯ್ಯ ಹಣ ಹಾಕ್ತಾರೆ ಅಂತ ಕಲಬುರಗಿಯಲ್ಲಿ ಮಹಿಳೆಯರ ನೂಕುನುಗ್ಗಲು!
ಮೋದಿ ಅಥವಾ ಸಿದ್ದರಾಮಯ್ಯ ಹಣ ಹಾಕುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಕಲಬುರಗಿಯ ಕೇಂದ್ರ ಅಂಚೆ ಕಚೇರಿ ಎದುರು ಡಿಜಿಟಲ್ ಖಾತೆ ತೆರೆಯಲು ಸಾವಿರಾರು ಮಹಿಳೆಯರು ಮುಗಿಬಿದ್ದಿದ್ದಾರೆ. ಯಾವುದೇ ಮಾಹಿತಿಯಿಲ್ಲದೆ ಕೇವಲ ವದಂತಿಯೊಂದಕ್ಕೆ ಜನರು ಖಾತೆ ತೆರೆಯಲು ಮುಂದಾಗಿದ್ದಾರೆ.
ಮೋದಿ ಹಣ ಹಾಕ್ತಾರೆ, ಸಿದ್ದರಾಮಯ್ಯ ಹಣ ಹಾಕ್ತಾರೆ ಅಂತ ಕಲಬುರಗಿಯ ಕೇಂದ್ರ ಅಂಚೆ ಕಚೇರಿ ಎದುರು ಸಾವಿರಾರು ಮಹಿಳೆಯರ ಜಮಾವಣೆಗೊಂಡ ಘಟನೆ ನಡೆದಿದೆ. ಡಿಜಿಟಲ್ ಅಕೌಂಟ್ ಖಾತೆ ತೆರೆಯಲು ಜನ ಮುಗಿಬಿದ್ದಿದ್ದಾರೆ.
ಬೆಳಿಗ್ಗೆಯಿಂದ ಸಾವಿರಾರು ಜನ ಮಹಿಳೆಯರು ಕ್ಯೂ ನಿಂತಿರು.ಮಾಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದೆ ಮೋದಿ ಹಣ ಹಾಕ್ತಾರೆ.ಡಿಜಿಟಲ್ ಅಕೌಂಟ್ ಇದ್ರೆ ಹಣ ಹಾಕ್ತಾರೆ ಎನ್ನೋ ವದಂತಿ ಹಬ್ಬಿದ ಹಿನ್ನೆಲೆ ಅಕೌಂಟ್ ತೆರೆಯಲು ಬೆಳಿಗ್ಗೆಯಿಂದಲೇ ಮಹಿಳೆಯರು ಕ್ಯೂ ನಿಂತರು.
ಸಿದ್ದರಾಮಯ್ಯ ಹಣ ಹಾಕ್ತಾರೆ ಅದಕ್ಕಾಗಿ ಬಂದಿದ್ದೇವೆ ಅಂತ ಮಹಿಳೆಯರು ಹೇಳಿದ್ದಾರೆ. ಮೋದಿ ಹಣ ಹಾಕ್ತಾರೆ ಅದಕ್ಕಾಗಿ ಅಕೌಂಟ್ ಓಪನ್ ಮಾಡ್ತಿದಿವಿ ಅಂತಾರೆ ಮತ್ತೆ ಕೆಲವರು. ಏನೂ ಗೊತ್ತಿಲ್ಲದೇ ಅವರೆಲ್ಲಾ ಬಂದಿದಾರೆ ಅಂದ್ರೆ ಏನೋ ಇರಬಹುದು ಅಂತ ಅಕೌಂಟ್ ಓಪನ್ ಮಾಡಲು ಮತ್ತೊಂದಿಷ್ಟು ಜನ ಮಹಿಳೆಯರು ಬಂದಿದ್ದಾರೆ.