ಚಿನ್ನದ ವ್ಯಾಪಾರಿಗಳ ಮನೆಯಲ್ಲಿ ಐಟಿ ತಲಾಶ್‌: 7 ಜ್ಯುವೆಲ್ಲರಿ ಶಾಪ್‌ಗಳಲ್ಲಿ ಸಿಕ್ಕಿದ್ದೆಷ್ಟು ?

ಜ್ಯುವೆಲ್ಲರಿ ಶಾಪ್‌ಗಳ ಮೇಲಿನ IT ದಾಳಿ ಮುಕ್ತಾಯ
ದಾಳಿ ವೇಳೆ ಹಲವು ಮಹತ್ವದ ದಾಖಲೆ ಪರಿಶೀಲನೆ
ವ್ಯವಹಾರ, ಆದಾಯ ತೆರಿಗೆ ವಂಚನೆ ಆರೋಪ 

Share this Video
  • FB
  • Linkdin
  • Whatsapp

ಚಿನ್ನದ ವ್ಯಾಪಾರಿ ಓರ್ವರಿಗೆ ಸೇರಿದ ಮನೆಯಲ್ಲಿ ಮೂರು ದಿನಗಳಿಂದ ಐಟಿ ಅಧಿಕಾರಿಗಳು(IT Raid) ಶೋಧ ನಡೆಸುತ್ತಿದ್ದರು. ಕಳೆದ ಮೂರು ದಿನಗಳಿಂದ ಶೋಧ ನಡೆಯುತ್ತಿದ್ದು, ಅಂಗಡಿ, ಶೋ ರೂಮ್‌, ಮಾಲೀಕರ ಮನೆಯಲ್ಲಿ ಐಟಿ‌‌ ಶೋಧ ಮಾಡುತ್ತಿತ್ತು. ಜಯನಗರದ ಎರಡನೇ ಬ್ಲಾಕ್‌ನ 7ನೇ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ನಡೆಸಲಾಗಿದೆ. ಸುಮಾರು 6ಕ್ಕೂ ಹೆಚ್ಚು ಇನೋವಾ ಕಾರಿನಲ್ಲಿ ಐಟಿ ಅಧಿಕಾರಿಗಳು ಬಂದಿದ್ದರು. ಸದ್ಯ ಈ ದಾಳಿ ಮುಕ್ತಾಯವಾಗಿದ್ದು, ಹಲವು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ವ್ಯವಹಾರ ಮತ್ತು ಆದಾಯ ತೆರಿಕೆ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಅಭೂಷನ್, ಪೊಲಿಸ್ಕ್, ರಿದ್ದಿ,ತಿರುಮಲ, ಮಂಗಳಂ ಸೇರಿ 7 ಜ್ಯುವೆಲ್ಲರಿ ಶಾಪ್(Jewelery Shops) ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ಡೀಪ್ ಫೇಕ್ ವಿಡಿಯೋಗೆ ರಶ್ಮಿಕಾನೇ ಟಾರ್ಗೆಟ್! ಮತ್ತೊಂದು ವಿಡಿಯೋ ವೈರಲ್!

Related Video