ಅಕ್ಷರ ದಾಸೋಹ ಬಿಸಿಯೂಟ ಬೇಳೆಯಲ್ಲಿ ಹುಳು ಪತ್ತೆ! ಬಾಲಹುಳು, ನುಸಿಹುಳು ಕಂಡು ಆತಂಕಗೊಂಡ ಮಕ್ಕಳು,ಪೋಷಕರು!
ಯಾದಗಿರಿಯ ವಡಗೇರಾ ತಾಲೂಕಿನ ಬೂದಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಹುಳು, ನುಸಿಹುಳು ಕಂಡು ಮಕ್ಕಳು, ಪೋಷಕರು ಆತಂಕಗೊಂಡಿದ್ದಾರೆ.
ಯಾದಗಿರಿ: ಅಕ್ಷರ ದಾಸೋಹ ಬಿಸಿಯೂಟದ (Mid day meal) ಬೇಳೆಯಲ್ಲಿ ಹುಳು ಪತ್ತೆಯಾಗಿದ್ದು, ಬಾಲಹುಳು, ನುಸಿಹುಳು ಕಂಡು ಮಕ್ಕಳು, ಪೋಷಕರು ಆತಂಕಗೊಂಡಿದ್ದಾರೆ. ಅವ್ಯವಸ್ಥೆಗೆ ಬೇಸತ್ತು ಶಾಲೆಗೆ ನುಗ್ಗಿ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಯಾದಗಿರಿ (Yadgir) ಜಿಲ್ಲೆಯ ವಡಗೇರಾ ತಾಲೂಕಿನ ಬೂದಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ(Budhinala Govt Junior Primary School) ಘಟನೆ ನಡೆದಿದೆ. ಅಕ್ಷರ ದಾಸೋಹ ಯೋಜನೆಯಡೀ ಶಾಲಾ ಮಕ್ಕಳ ಊಟಕ್ಕಾಗಿ ಅಕ್ಕಿ ಹಾಗೂ ಬೇಳೆಯನ್ನು ನೀಡಲಾಗ್ತದೆ. ಕಳೆದ ಐದು ದಿನಗಳಿಂದ ಹುಳು ಹಿಡಿದ ದವಸ ಧಾನ್ಯಗಳನ್ನು ಬಳಸಿ ಮಕ್ಕಳಿಗೆ ಊಟ ಬಡಿಸಲಾಗಿದೆ. ಅನ್ನ-ಸಾಂಬಾರಿನಲ್ಲಿ ಬಾಲ ಹುಳು ಹಾಗೂ ನುಸಿಹುಳು ಕಂಡು ಬಂದಿವೆ. ಬಾಲಹುಳು ನುಸಿಹುಳುಗಳನ್ನು ಕಂಡು ವಿದ್ಯಾರ್ಥಿಗಳು ಬೆಚ್ಚಿಬಿದ್ದಾರೆ. ಅದು ನುಸಿಹುಳು ಅಲ್ಲ ಜೀರಗಿ ಎಂದು ಹೆಡ್ ಮಾಸ್ಟರ್ ಸಬೂಬು ಹೇಳಿದ್ದಾರೆ. ಹೆಡ್ ಮಾಸ್ಟರ್ ನಿರ್ಲಕ್ಷ್ಯಕ್ಕೆ ಶಾಲೆಗೆ ನುಗ್ಗಿದ ಗ್ರಾಮಸ್ಥರು, ಶಾಲೆಯ ಹೆಡ್ ಮಾಸ್ಟರ್, ಅಡುಗೆ ಸಿಬ್ಬಂದಿಗಳ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಬಳ್ಳಾರಿ ಬಂಟನ ಭ್ರಷ್ಟ ಚರಿತ್ರೆ ನೋಡಿಯೂ ತಪ್ಪು ಮಾಡಿದ್ರಾ ಸಿದ್ದು..?'ನಾಗ'ಕೋಟೆಯಲ್ಲೇ ಬಂಧಿಯಾದ ನಾಗೇಂದ್ರ..!