ಶಕ್ತಿ ಯೋಜನೆ ಆರಂಭದಲ್ಲೇ ಅಕ್ರಮದ ವಾಸನೆ: ಪ್ರಯಾಣಿಕರ ದಿಢೀರ್ ಏರಿಕೆ ಹಿಂದಿದೆಯಾ ಗೋಲ್‌ಮಾಲ್?
ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆಯಲ್ಲಿ ಅಕ್ರಮದ ವಾಸನೆ ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಆತಂರಿಕ ಸುತ್ತೋಲೆಯನ್ನು ಹೊರಡಿಸಿದೆ.
ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ದುರುಪಯೋಗ ಆಗ್ತಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಶಕ್ತಿ ಯೋಜನೆ(Shakti scheme) ಆರಂಭದಲ್ಲೇ ಅಕ್ರಮದ ವಾಸನೆ ಬರುತ್ತಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಗೋಲ್‌ಮಾಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಿರೀಕ್ಷೆಗೂ ಮೀರಿ ಮಹಿಳಾ(women) ಪ್ರಯಾಣಿಕರು ಓಡಾಟ ಮಾಡುತ್ತಿದ್ದಾರೆ. ಪ್ರಯಾಣಿಕರಿಗಿಂತ ಹೆಚ್ಚಿನ ಟಿಕೆಟ್ (Ticket) ನೀಡಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಒಂದು ವೇಳೆ ಹೆಚ್ಚಿನ ಟಿಕೆಟ್ ನೀಡಿದ್ರೆ, ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಸುತ್ತೋಲೆಯನ್ನು(Circular) ಹೊರಡಿಸಿದೆ. ಈ ಸಂಬಂಧ ಸಾರಿಗೆ ಸಿಬ್ಬಂದಿಗೆ ಆತಂರಿಕ ಸುತ್ತೋಲೆ ಹೊರಡಿಸಲಾಗಿದೆ.
ಇದನ್ನೂ ವೀಕ್ಷಿಸಿ: ಸಿಲಿಕಾನ್ ಸಿಟಿಯಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ