ವಿಜಯಪುರದಲ್ಲಿ ಕಲ್ಲು ಗಣಿಗಾರಿಕೆಗಳ ಅಬ್ಬರ: ಭಯಾನಕನ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ..!

ಸ್ಫೋಟಕ್ಕೆ ಮನೆಗಳ ಗೋಡೆ ಬಿರುಕು, ಬೆಳೆ ಹಾನಿ| ವಿಜಯಪುರ ಜಿಲ್ಲೆಯ ಅರಕೇರಿ-ಸಿದ್ದಾಪುರ ಗ್ರಾಮದಲ್ಲಿ ನಡೆದ ಘಟನೆ| ಗಣಿಗಾರಿಕೆಯಿಂದ ಬತ್ತಿ ಹೋದ್ವು ಬಾವಿಗಳು| 

First Published Jan 23, 2021, 3:23 PM IST | Last Updated Jan 23, 2021, 3:23 PM IST

ವಿಜಯಪುರ(ಜ.23): ಜಿಲ್ಲೆಯಲ್ಲಿಯೂ ಕೂಡ ಕಲ್ಲು ಗಣಿಗಾರಿಕೆಯ ಅಬ್ಬರ ನಡೆಯುತ್ತಿದೆ. ಹೌದು, ಗ್ರಾಮದ ಬಹುತೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟ ಘಟನೆ ಜಿಲ್ಲೆಯ ಅರಕೇರಿ-ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರು ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುತ್ತಿದ್ದಾರೆ. 

ಬಾರ್, ಪೆಟ್ರೋಲ್ ಬಂಕ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್, ಫೀಲ್ಡಿಗಿಳಿದ್ರೆ ಮಿಸ್ಸೇ ಇಲ್ಲ..!

ಈ ಎರಡೂ ಗ್ರಾಮಗಳಲ್ಲಿ ಬೆಳೆದ ಬೆಳೆ ಫಸಲು ಕೊಡುತ್ತಿಲ್ಲ, ದ್ರಾಕ್ಷಿ, ತೊಗರಿ, ಮೆಕ್ಕಜೋಳ, ಸಜ್ಜೆ, ಲಿಂಬೆ ಬೆಳೆ ಹಾಳಾಗಿದೆ. ಗಣಿಗಾರಿಕೆಯಿಂದ ಬಾವಿಯಲ್ಲಿ ನೀರು ಬತ್ತಿವೆ. ಇದರಿಂದ ಜನರು ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ.