Shivamogga: ಶಿವಮೊಗ್ಗದಲ್ಲಿ ಅಕ್ರಮ ದನದ ಮಾಂಸದ ದಂಧೆ ನಡೆಸಿದ 'ಕೈ' ಕಾರ್ಪೋರೇಟರ್

ಶಿವಮೊಗ್ಗದಲ್ಲಿ ಅಕ್ರಮ ಗೋಮಾಂಸದ ದಂಧೆ ಮಿತಿಮೀರಿದ್ದು, ನಗರದ ಹಲವೆಡೆ ಅಕ್ರಮ ದನದ ಮಾಂಸದ ಅಡ್ಡೆಗಳು ತಲೆ ಎತ್ತಿವೆ.  

Share this Video
  • FB
  • Linkdin
  • Whatsapp

ಶಿವಮೊಗ್ಗದಲ್ಲಿ ದನದ ಮಾಂಸ ಅಡ್ಡೆ ನಡೆಸಿ ಕಾರ್ಪೋರೇಟರ್ ಸಿಕ್ಕಿ ಬಿದ್ದಿದ್ದಿದ್ದಾನೆ. ಮಾಜಿ ಮೇಯರ್‌ ಖುರ್ಷಿಧಾ ಭಾನು ಪತಿ ಶಾಮೀರ್‌ ಖಾನ್‌ ಮನೆಯಲ್ಲಿಯೇ, ಕಾರ್ಪೋರೇಟರ್ ಶಾಮೀರ್ ದನದ ಮಾಂಸ ಮಾರಾಟ ಮಾಡುತ್ತಿದ್ದ. ಕಾಂಗ್ರೆಸ್ ಕಾರ್ಪೋರೇಟರ್ ಶಾಮೀರ್‌ ಖಾನ್‌'ಗೆ ಪುತ್ರ ಇಬಾದ್‌ ಸಾಥ್ ನೀಡುತ್ತಿದ್ದ. ಇದೀಗ ಇಬಾಬ್ ಪರಾರಿಯಾಗಿದ್ದು, ಶಾಮೀರ್‌ ಮನೆಯಲ್ಲಿ 40 ಕೆಜಿ ದನದ ಮಾಂಸ ಪತ್ತೆಯಾಗಿದ್ದು, ತುಂಗಾನಗರ ಠಾಣೆಯ PSI ಶಿವಪ್ರಸಾದ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇನ್ನು ತಲೆಮರಿಸಿಕೊಂಡ ಕಾರ್ಪೋರೇಟರ್ ಶಾಮೀರ್‌ ಖಾನ್‌'ಗೆ ಹುಡುಕಾಟ ನಡೆದಿದೆ. ಶಾಮೀರ್‌ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್‌ ರೈಟ್‌ ಹ್ಯಾಂಡ್‌ ಆಗಿದ್ದಾನೆ.

Related Video