ರೋಹಿಣಿ ಕನ್ನಡಿಗರನ್ನು ದ್ವೇಷಿಸಿದ್ದು ನೋಡಿದ್ದಿರಾ?: ರೂಪಾಗೆ ಸಿಂಧೂರಿ ಫ್ಯಾನ್ಸ್‌ ಪ್ರಶ್ನೆ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಟಾಕ್ ವಾರ್‌ ಭಾರೀ ಸದ್ದು ಮಾಡುತ್ತಿದೆ‌.
 

Share this Video
  • FB
  • Linkdin
  • Whatsapp

ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಫ್ಯಾನ್ಸ್‌ ಕಿಡಿ ಕಾರಿದ್ದಾರೆ. ರೋಹಿಣಿ ಸಿಂಧೂರಿ ಎಂದಾದರೂ ಕನ್ನಡಿಗರನ್ನು ದ್ವೇಷಿಸಿದ್ದು ನೋಡಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಸಿಂಧೂರಿ ಮೇಲೆ ನೇರ ಆರೋಪ ಹೊರಿಸುವುದು ಏಕೆ?. ಬೇರೆ ರಾಜ್ಯದವರು ಎಂದು ಹೇಳಿ ನೋವುಂಟು ಮಾಡಿದ್ದು ಸರೀನಾ ಎಂದು ಕೇಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಕನ್ನಡಿಗರು ಯಾರು ಸೇವೆ ಸಲ್ಲಿಸುತ್ತಿಲ್ಲವೇ?. ಡಿಜಿಪಿ ಸಿಎಂ ಗಮನಕ್ಕೆ ತರದೆ ವೈರಲ್‌ ಮಾಡಿದ್ದು ಸರಿಯೇ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರೋಹಿಣಿ ಸಿಂಧೂರಿ ಆರ್ಗನೈಸೇಷನ್‌ ಖಾತೆಯಿಂದ ಪ್ರಶ್ನೆ ಕೇಳಲಾಗಿದ್ದು, ಐಪಿಎಸ್ ಅಧಿಕಾರಿ ಮತ್ತು ಐಎಎಸ್ ಅಧಿಕಾರಿ ನಡುವಿನ ಜಟಾಪಟಿ ಮುಂದುವರೆದಿದೆ. ರೋಹಿಣಿ ಸಿಂಧೂರಿ ಅಭಿಮಾನಿಗಳಿಂದ ರೂಪಾಗೆ ಪ್ರಶ್ನೆಗಳನ್ನು ಕೇಳಲಾಗಿದೆ.

Related Video