3000 ಸಾವಿರ ವರ್ಷದ ನಂಜನಗೂಡು ದೇಗುಲವು ಧ್ವಂಸ : ಬೃಹತ್ ಪ್ರತಿಭಟನೆ

  ಮೈಸೂರು (ಸೆ.16):  ದೇವಸ್ಥಾನ ತೆರವು ಕಾರ್ಯಾಚರಣೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿರುವ ನಂಜನಗೂಡು ತಾಲೂಕು ಹುಚ್ಚಗಣಿಯಲ್ಲಿ 3 ಸಾವಿರ ವರ್ಷದಷ್ಟು ಪುರಾತನವಾದ ಶಿಲಾಯುಗ ಸಂಸ್ಕೃತಿಯ ಸಮಾಧಿ, ಗಂಗರು, ಹೊಯ್ಸಳರ ಕಾಲದ ವೀರಗಲ್ಲು ಪತ್ತೆಯಾಗಿದೆ.  ಪುರಾತನ ದೇವಾಲಯ ಧ್ವಂಸಕ್ಕೆ  ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳಿಂದ ಬೇಕಾಬಿಟ್ಟಿ ತೆರವಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

Share this Video
  • FB
  • Linkdin
  • Whatsapp

 ಮೈಸೂರು (ಸೆ.16):  ದೇವಸ್ಥಾನ ತೆರವು ಕಾರ್ಯಾಚರಣೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿರುವ ನಂಜನಗೂಡು ತಾಲೂಕು ಹುಚ್ಚಗಣಿಯಲ್ಲಿ 3 ಸಾವಿರ ವರ್ಷದಷ್ಟು ಪುರಾತನವಾದ ಶಿಲಾಯುಗ ಸಂಸ್ಕೃತಿಯ ಸಮಾಧಿ, ಗಂಗರು, ಹೊಯ್ಸಳರ ಕಾಲದ ವೀರಗಲ್ಲು ಪತ್ತೆಯಾಗಿದೆ.

ಪುರಾತನ ದೇವಾಲಯ ಧ್ವಂಸಕ್ಕೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳಿಂದ ಬೇಕಾಬಿಟ್ಟಿ ತೆರವಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

ಮೈಸೂರಲ್ಲಿ 3 ಸಾವಿರ ವರ್ಷದ ಹಿಂದಿನ ದೇಗುಲ ತೆರವು ! ಶಿಲಾಯುಗ ಸಮಾಧಿ, ವೀರಗಲ್ಲು ಪತ್ತೆ

ಶಿಲಾಯುಗ ಸಂಸ್ಕೃತಿಯ ಸಮಾಧಿಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಅವಶೇಷಗಳು, 9 ರಿಂದ 10ನೇ ಶತಮಾನದ ಗಂಗರು, 11 ಮತ್ತು 12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲು ಪತ್ತೆಯಾಗಿದೆ. ಸುಮಾರು 3000 ವರ್ಷಗಳ ಬೃಹತ್‌ ಶಿಲಾಯುಗ ಸಂಸ್ಕೃತಿಯ ಸಮಾಧಿ ನಮೂನೆಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಮಡಿಕೆ ಚೂರುಗಳು, ಹಗೇವುಗಳು ಹಾಗೂ 9-10ನೇ ಶತಮಾನದ ಗಂಗರ, 11-12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲುಗಳು ಶೋಧನೆಯಾಗಿವೆ.

Related Video