ಮೈಸೂರಲ್ಲಿ 3 ಸಾವಿರ ವರ್ಷದ ಹಿಂದಿನ ದೇಗುಲ ತೆರವು ! ಶಿಲಾಯುಗ ಸಮಾಧಿ, ವೀರಗಲ್ಲು ಪತ್ತೆ

  •  ದೇವಸ್ಥಾನ ತೆರವು ಕಾರ್ಯಾಚರಣೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿರುವ ನಂಜನಗೂಡು ತಾಲೂಕು ಹುಚ್ಚಗಣಿ ದೇವಾಲಯ
  • 3 ಸಾವಿರ ವರ್ಷದಷ್ಟು ಪುರಾತನವಾದ ಶಿಲಾಯುಗ ಸಂಸ್ಕೃತಿಯ ಸಮಾಧಿ
cholas period temple demolished in mysore snr

ಮೈಸೂರು (ಸೆ.16):  ದೇವಸ್ಥಾನ ತೆರವು ಕಾರ್ಯಾಚರಣೆಯಿಂದ ರಾಜ್ಯಾದ್ಯಂತ ಸುದ್ದಿಯಾಗಿರುವ ನಂಜನಗೂಡು ತಾಲೂಕು ಹುಚ್ಚಗಣಿಯಲ್ಲಿ 3 ಸಾವಿರ ವರ್ಷದಷ್ಟು ಪುರಾತನವಾದ ಶಿಲಾಯುಗ ಸಂಸ್ಕೃತಿಯ ಸಮಾಧಿ, ಗಂಗರು, ಹೊಯ್ಸಳರ ಕಾಲದ ವೀರಗಲ್ಲು ಪತ್ತೆಯಾಗಿದೆ. ಅಲ್ಲದೆ, ತೆರವಿಗೆ ಒಳಗಾದ ಮಹಾದೇವಮ್ಮ ದೇವಾಲಯ ಚೋಳರ ಕಾಲದ್ದು ಎನ್ನಲಾಗಿದೆ.

ಮೈಸೂರಿನ ಕುವೆಂಪುನಗರ ಪಿಯು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕ ಡಾ.ಎಸ್‌.ಜಿ. ರಾಮದಾಸ ರೆಡ್ಡಿ ಅವರು ಸಂಶೋಧನಾ ವಿದ್ಯಾರ್ಥಿ ಬಿ.ಎಸ್‌. ಚರಣ್‌ಕುಮಾರ್‌, ಎನ್ನೆಸ್ಸೆಸ್‌ ಸ್ವಯಂ ಸೇವಕ ಎನ್‌.ಎಲ್‌.ಪುನೀತ್‌ ಕುಮಾರ್‌ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ನಡೆಸಿದ ಇತಿಹಾಸದ ಶೋಧಕಾರ್ಯದಲ್ಲಿ ಈ ಅಂಶ ಪತ್ತೆಯಾಗಿದೆ.

ಮೈಸೂರು: ಕೆಡವಿದ್ದ ದೇವಸ್ಥಾನವನ್ನು ಮರು ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತ ಗ್ರಾಮಸ್ಥರು

ಶಿಲಾಯುಗ ಸಂಸ್ಕೃತಿಯ ಸಮಾಧಿಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಅವಶೇಷಗಳು, 9 ರಿಂದ 10ನೇ ಶತಮಾನದ ಗಂಗರು, 11 ಮತ್ತು 12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲು ಪತ್ತೆಯಾಗಿದೆ. ಸುಮಾರು 3000 ವರ್ಷಗಳ ಬೃಹತ್‌ ಶಿಲಾಯುಗ ಸಂಸ್ಕೃತಿಯ ಸಮಾಧಿ ನಮೂನೆಗಳಲ್ಲಿ ಒಂದಾದ ಹಾಸುಬಂಡೆ ಸಮಾಧಿ, ಮಡಿಕೆ ಚೂರುಗಳು, ಹಗೇವುಗಳು ಹಾಗೂ 9-10ನೇ ಶತಮಾನದ ಗಂಗರ, 11-12ನೇ ಶತಮಾನದ ಹೊಯ್ಸಳರ ಕಾಲದ 5 ವೀರಗಲ್ಲುಗಳು ಶೋಧನೆಯಾಗಿವೆ.

ಇನ್ನು ಒಡೆದು ಹಾಕಿರುವ ಆದಿಶಕ್ತಿ ಮಹದೇವಮ್ಮನ ದೇವಾಲಯದಲ್ಲಿ ಆದಿಶಕ್ತಿ ಮಹದೇವಮ್ಮನ ಮೂರ್ತಿಶಿಲ್ಪ, ಬೈರವೇಶ್ವರ ಮೂರ್ತಿಶಿಲ್ಪಗಳು ಇದ್ದು, ಇವು ಚೋಳರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡಿವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios