Hubli Riots: ಗಲಾಟೆಗೆ ಸಂಬಂಧಿಸಿಲ್ಲದವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ: ಕುಟುಂಬಸ್ಥರ ಅಳಲು

ನನ್ನ ತಮ್ಮನಿಗೆ ನಿನ್ನೆ ರಾತ್ರಿ ನಡೆದ ಗಲಾಟೆ ಬಗ್ಗೆ ಗೊತ್ತೇ ಇಲ್ಲ ಎಂದು ಇಮ್ತಿಯಾಜ್‌ ಅಹ್ಮದ್‌ ಅಕ್ಕ  ಅಳಲು ತೋಡಿಕೊಂಡಿದ್ದಾರೆ 

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಏ. 17): ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿರುವ ವಿಚಾರವಾಗಿ ಹಳೆ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ (Hubballi Riots) ಸಂಭವಿಸಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಈ ಬೆನ್ನಲ್ಲೇ ನಗರದಲ್ಲಿ 144 ಸೆಕ್ಷನ್‌ ಜಾರಿಯಾಗಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತರ ಪೋಷಕರು ಪೊಲೀಸ್‌ ಠಾಣೆ ಎದುರು ಹೈಡ್ರಾಮ ನಡೆಸಿದ್ದಾರೆ. 

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಹೇಗೆ?

ಹಳೆ ಹುಬ್ಬಳ್ಳಿ ಠಾಣೆ ಬಳಿ ಬಂಧಿತರ ಪೋಷಕರು ಜಮಾವಣೆಗೊಂಡಿದ್ದು "ಗಲಾಟೆಗೆ ಸಂಬಂಧ ಇಲ್ಲದವರನ್ನೂ ಪೊಲೀಸರು ಕರೆ ತಂದಿದ್ದಾರೆ" ಎಂದು ಬಾಂತಿಕಟ್ಟಾ ನಿವಾಸಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. "ನನ್ನ ತಮ್ಮನಿಗೆ ನಿನ್ನೆ ರಾತ್ರಿ ನಡೆದ ಗಲಾಟೆ ಬಗ್ಗೆ ಗೊತ್ತೇ ಇಲ್ಲ, ರಾತ್ರಿ 1 ಗಂಟೆಗೆ ಮನೆಗೆ ಪೊಲೀಸರು ಬಂದು ಕರೆದೊಯ್ದರು, ನನ್ನ ತಮ್ಮನದು ತಪ್ಪಿಲ್ಲ, ತಪ್ಪೇ ಮಾಡಿಲ್ಲ" ಎಂದು ಇಮ್ತಿಯಾಜ್‌ ಅಹ್ಮದ್‌ ಅಕ್ಕ ಅಳಲು ತೋಡಿಕೊಂಡಿದ್ದಾರೆ 

Related Video