ಹುಬ್ಬಳ್ಳಿ ಗಲಭೆ: ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಹೇಗೆ?
* ಮಸೀದಿ ಚಿತ್ರದ ಮೇಲೆ ಕೇಸರಿ ಧ್ವಜ ವಿವಾದ
* ಇದೊಂದು ಪೂರ್ವನಿಯೋಜಿತ ಕೃತ್ಯ
* ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಕುಲ್ಲು ತೂರಾಟ ನಡೆಸಿದ್ದ ಯುವಕರು
ಹುಬ್ಬಳ್ಳಿ(ಏ.17): ಮಸೀದಿ ಚಿತ್ರದ ಮೇಲೆ ಕೇಸರಿ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂರಿಂದ ಹಿಂಸಾತ್ಮಕ ಪ್ರತಿಭಟನೆ ನಿನ್ನೆ(ಶನಿವಾರ) ನಡೆದಿದೆ. ನಿನ್ನೆ ನಡೆದ ಘಟನೆಯನ್ನ ಗಮನಿಸಿದರೆ ಇದೊಂದು ಪೂರ್ವನಿಯೋಜಿತ ಕೃತ್ಯ ಅನ್ನುವಂತದ್ದು ಸ್ಪಷ್ಟವಾಗಿ ತಿಳಿದು ಬಂದಿದೆ. ಕಲ್ಲು ತೂರಾಟದಲ್ಲಿ ಭಾಗವಹಿಸಿದ್ದ ಯುವಕರೆಲ್ಲರೂ ಸುಮಾರು 20 ವಯಸ್ಸಿನವರಾಗಿದ್ದಾರೆ ಅಂತ ಸ್ಥಳೀಯರು ಹೇಳಿದ್ದಾರೆ. ಯಾರೂ ಕೂಡ 40-50 ವಯಸ್ಸಿನವರು ಇರಲಿಲ್ಲ, ಎಲ್ಲರೂ ಮುಖಕ್ಕೆ ಕಪ್ಪು ಬಟ್ಟೆಯನ್ನ ಕಟ್ಟಿಕೊಂಡಿದ್ದರು ಅಂತ ತಿಳಿದು ಬಂದಿದೆ. ತಮ್ಮ ಗುರುತು ಸಿಗದಿರಲು ಹೀಗೆ ಮಾಡಿದ್ದಾರೆ. ಹೀಗಾಗಿ ಇದೊಂದು ಇದೊಂದು ಪೂರ್ವನಿಯೋಜಿತ ಕೃತ್ಯ ಅಂತ ಸ್ಪಷ್ಟವಾಗಿ ತಿಳಿದು ಬಂದಿದೆ.
Hubballi Riot: 20 ಕ್ಕೂ ಹೆಚ್ಚು ಮಂದಿ ಬಂಧನ, ಪೂರ್ವನಿಯೋಜಿತ ಕೃತ್ಯದ ಅನುಮಾನ