ಬೆಂಗಳೂರು; ಕಾಮಗಾರಿ ವೇಳೆ ಶಿವ-ಪಾರ್ವತಿ ಪ್ರತ್ಯಕ್ಷ!
ಬೆಂಗಳೂರಿನಲ್ಲಿ ಪುರಾತನ ದೇವಾಲಯ/ ಕಾಮಗಾರಿ ವೇಳೆ ವಸ್ತುಗಳು ಪತ್ತೆ/ ಕ್ಕಪೇಟೆ ಸಮೀಪದ ಜಲಕಂಠೇಶ್ವರ ದೇವಾಲಯದ ಪಕ್ಕ ಪುರಾತನ ಶಿಲೆಯೊಂದು ಪತ್ತೆ/ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಭೇಟಿ
ಬೆಂಗಳೂರು(ಜ. 06) ಅದು ಬೆಂಗಳೂರಿನ ಪುರಾತನ ದೇವಾಲಯ. ದೇವಾಲಯದ ಪಕ್ಕದಲ್ಲಿ ಕಾಲೇಜಿಗೆ ಸೇರಿದ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು. ಆದ್ರೆ, ಕಾಮಗಾರಿ ವೇಳೆ ಪುರಾತನ ವಸ್ತುಗಳು ಪತ್ತೆಯಾಗಿವೆ. ಅಷ್ಟಕ್ಕೂ ಅಲ್ಲಿ ಸಿಕ್ಕ ವಸ್ತುಗಳೇನು? ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ.
ಪುರಾತನ ಶಿಲ್ಪವಿರುವ ಕಲ್ಲು. ಶಿಲ್ಪದ ಪಕ್ಕದಲ್ಲಿ ದುಂಡನೇ ಗುಂಡು. ಶಿವ-ಪಾರ್ವತಿಯರು ನಂದಿಯ ಮೇಲೆ ಕೂತು ಸಾಗುತ್ತಿರುವ ಚಿತ್ರ, ಡೊಳ್ಳು ಬಾರಿಸುವ ಚಿತ್ರದ ಸಮೇತ ಶಿಲೆ. ಇಂಥ ಅಪರೂಪದ ದೃಶ್ಯ ಕಂಡುಬಂದಿದ್ದು ಬೆಂಗಳೂರಿನ ಹೃದಯಭಾಗದಲ್ಲಿ. ಕಲಾಸಿಪಾಳ್ಯದ ವಾಣಿ ವಿಲಾಸ ಶಾಲೆಯ ನೂತನ ಕಟ್ಟಡ ಕಾಮಗಾರಿ ವೇಳೆ ಚಿಕ್ಕಪೇಟೆ ಸಮೀಪದ ಜಲಕಂಠೇಶ್ವರ ದೇವಾಲಯದ ಪಕ್ಕ ಪುರಾತನ ಶಿಲೆಯೊಂದು ಪತ್ತೆಯಾಗಿದೆ. ಇದರ ಜತೆಗೆ ಟಿಪ್ಪು ಕಾಲದ ಒಂದು ಮದ್ದು ಗುಂಡು ಕೂಡ ಸಿಕ್ಕಿದೆ. ಇದು ಸುಮಾರು 800 ವರ್ಷಗಳಿಗೂ ಹೆಚ್ಚು ಹಳೆಯದಿರಬಹುದು ಎಂದು ಅಂದಾಜಿಸಲಾಗಿದೆ. ಜಲಕಂಠೇಶ್ವರ ದೇವಸ್ಥಾನ ಇಲ್ಲಿಯೇ ಇರುವುದರಿಂದ ಪುಷ್ಕರಣಿ ಇತ್ತೆಂದು ಅಂದಾಜಿಸಲಾಗಿದೆ. ಈ ವಿಷಯ ತಿಳಿಯುತ್ತದ್ದಂತೆ ಸ್ಥಳಕ್ಕೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.