ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ಪಟ್ಟು ಬಿಡದ ಹಿಂದೂ ಸಂಘಟನೆಗಳು

ಸರ್ಕಾರ ಅವಕಾಶ ನೀಡದಿದ್ದರೆ ಶಾಸಕ ಜಮೀರ್‌ ಅವರು ಈದ್ಗಾ ಮೈದಾನದಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಬೇಕು, ಎಲ್ಲಾ ಪೂಜಾ ವಿಧಿ-ವಿಧಾನಗಳನ್ನ ಜಮೀರ್‌ ಅವರೇ ಮಾಡಬೇಕು, ನಾವು ಅವರಿಗೆ ನಾಥ್‌ ಕೊಡುತ್ತೇವೆ: ಮುತಾಲಿಕ್ 

Share this Video
  • FB
  • Linkdin
  • Whatsapp

ಬೆಂಗಳೂರು(ಆ.20): ನಗರದ ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆಗೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಶಾಸಕ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಅಸ್ತ್ರ ಬಿಡಲು ಹಿಂದೂ ಸಂಘಟನೆ ಸಜ್ಜಾಗಿದೆ. ಶಾಸಕರ ವಿರುದ್ಧ ಅಭಿಯಾನಕ್ಕೆ ಪ್ರಮೋದ್‌ ಮುತಾಲಿಕ್‌ ಮುಂದಾಗಿದ್ದಾರೆ. ಸರ್ಕಾರ ಅವಕಾಶ ನೀಡದಿದ್ದರೆ ಶಾಸಕ ಜಮೀರ್‌ ಅವರು ಈದ್ಗಾ ಮೈದಾನದಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಬೇಕು, ಎಲ್ಲಾ ಪೂಜಾ ವಿಧಿ-ವಿಧಾನಗಳನ್ನ ಜಮೀರ್‌ ಅವರೇ ಮಾಡಬೇಕು, ನಾವು ಅವರಿಗೆ ನಾಥ್‌ ಕೊಡುತ್ತೇವೆ ಅಂತ ಜಮೀರ್‌ಗೆ ಮುತಾಲಿಕ್‌ ಸವಾಲ್‌ ಹಾಕಿದ್ದಾರೆ. ಒಂದು ವೇಳೆ ನಿರಾಕರಿಸಿದ್ದೇ ಆದರೆ ನಮ್ಮ ಹೋರಾಟ ಜಮೀರ್‌ ವಿರುದ್ಧವೇ ಆಗಿರುತ್ತದೆ ಅಂತ ತಿಳಿಸಿದ್ದಾರೆ.

Related Video