Asianet Suvarna News Asianet Suvarna News

'ಉತ್ತರ ಕೊಡಿ' ಪ್ರತಾಪ್ ಸಿಂಹ-ತೇಜಸ್ವಿ ಸೂರ್ಯಗೆ ಹಿಂದು ಕಾರ್ಯಕರ್ತರ ಮುತ್ತಿಗೆ

Sep 16, 2021, 5:22 PM IST

ಚಿಕ್ಕಮಗಳೂರು(ಸೆ. 16)ಮೈಸೂರಿನಲ್ಲಿ ದೇವಾಲಯ ಕೆಡವಿರುವ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಪರ ಸಂಘಟನೆಗಳು ಸಂಸದರಿಗೆ ಮುತ್ತಿಗೆ ಹಾಕಿವೆ. ಸಂಸದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದ್ದಾರೆ.

ಕೊನೆಗೂ ದೇವಾಲಯ ತೆರವಿಗೆ ಬ್ರೇಕ್.. ಸಿಎಂ ಏನಂದ್ರು?

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಸ್ ನಿಲ್ದಾಣದ ಸಮೀಪ ಹಿಂದು ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ನಂಜನಗೂಡಿನ ದೇವಾಲಯ ನೆಲಸಮ ಮಾಡಿದ್ದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.