12 ಕೊರೋನಾ ಕೇಸ್ ಪತ್ತೆ: ಭಟ್ಕಳದಲ್ಲಿ ಹೈ ಅಲರ್ಟ್..!

ಭಟ್ಕಳವನ್ನು 5 ವಲಯಗಳಾಗಿ ವಿಂಗಡಿಸಲಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಹಾಟ್‌ಸ್ಪಾಟ್ ಝೋನ್ ಮದೀನಾ ಕಾಲೋನಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಶುಕ್ರವಾರ 12 ಕೊರೋನಾ ಪ್ರಕರಣಗಳು ಭಟ್ಕಳದಲ್ಲಿ ಪತ್ತೆಯಾಗಿದ್ದವು.

First Published May 9, 2020, 12:15 PM IST | Last Updated May 9, 2020, 12:15 PM IST

ಭಟ್ಕಳ(ಮೇ.09): ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಕೋವಿಡ್ 19 ಪ್ರಕರಣಗಳು ದೃಢಪಟ್ಟ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲಾಡಳಿತ ಭಟ್ಕಳದ ಸಂಪೂರ್ಣ ಜವಾಬ್ದಾರಿಯನ್ನು ಪೊಲೀಸರ ಕೈಗಿಟ್ಟಿದೆ.

ಭಟ್ಕಳವನ್ನು 5 ವಲಯಗಳಾಗಿ ವಿಂಗಡಿಸಲಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಹಾಟ್‌ಸ್ಪಾಟ್ ಝೋನ್ ಮದೀನಾ ಕಾಲೋನಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಶುಕ್ರವಾರ 12 ಕೊರೋನಾ ಪ್ರಕರಣಗಳು ಭಟ್ಕಳದಲ್ಲಿ ಪತ್ತೆಯಾಗಿದ್ದವು.

ಅಮೆರಿಕದಲ್ಲಿ ದಾವಣಗೆರೆಯ ಗರ್ಭಿಣಿ ವೈದ್ಯೆ ನಿಸ್ವಾರ್ಥ ಸೇವೆ

ಭಟ್ಕಳದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಒಬ್ಬ ವಲಯ ಅಧಿಕಾರಿ, 200 ಸಿವಿಲ್ ಪೊಲೀಸರು. 2 KSRP, 4 DAR ತುಕಡಿ, 4 ಜನ CPI, 3 PSI ಗಳನ್ನು ನಿಯೋಜಿಸಲಾಗಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.