ಕಲಬುರಗಿಯಲ್ಲಿ ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ, ಮುಂದುವರೆದ ಶೋಧ ಕಾರ್ಯ

ಅದು ಅಂತಹ ಭಾರಿ ಮಳೆಯೇನೂ ಆಗಿರಲಿಲ್ಲ, ಎಂದಿಗಿಂತ ತುಸು ಬಿರುಸಿನಿಂದ ಸುರಿದಿತ್ತು, ಅಷ್ಟಕ್ಕೆ ಕಲಬುರಗಿ ಮಹಾ ನಗರ ಮುಳುಗಿತ್ತು. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತೀರ್ಥ ಗ್ರಾಮದ ಹೊರವಲಯದಲ್ಲಿರುವ ಹಳ್ಳದಲ್ಲಿ ಶ್ರೀದೇವಿ ಎನ್ನುವ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ.

Share this Video
  • FB
  • Linkdin
  • Whatsapp

ಅದು ಅಂತಹ ಭಾರಿ ಮಳೆಯೇನೂ ಆಗಿರಲಿಲ್ಲ, ಎಂದಿಗಿಂತ ತುಸು ಬಿರುಸಿನಿಂದ ಸುರಿದಿತ್ತು, ಅಷ್ಟಕ್ಕೆ ಕಲಬುರಗಿ ಮಹಾ ನಗರ ಮುಳುಗಿತ್ತು. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತೀರ್ಥ ಗ್ರಾಮದ ಹೊರವಲಯದಲ್ಲಿರುವ ಹಳ್ಳದಲ್ಲಿ ಶ್ರೀದೇವಿ ಎನ್ನುವ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ. 

ರಸ್ತೆಗಳ ಇಕ್ಕೆಲಗಳಲ್ಲಿ ನೀರು ಅದೆಷ್ಟುಸೇರಿತ್ತೆಂದರೆ ಅಕ್ಕಪಕ್ಕದ ಮನೆಗಳ ಅಂಗಳಕ್ಕೂ ಈ ನೀರು ನುಗ್ಗಿ ತೊಂದರೆ ನೀಡಿತ್ತು. ಜಿಲ್ಲಾ ಕೋರ್ಟ್ ರಸ್ತೆಯ ಐಸಿಐಸಿಐ ಬ್ಯಾಂಕ್‌ ಬಳಿಯಂತೂ 3 ಅಡಿಗೂ ಹೆಚ್ಚು ನೀರು ಶೇಖರಗೊಂಡು ವಾಹನ ಸವಾರರು ಪರದಾಡುವಂತಾಯ್ತು. ಇನ್ನು ಬ್ರಹ್ಮಪೂರದ ಹಳೆಯ ರಾಮ ಮಂದಿರ ಮುಂದಿನ ರಸ್ತೆಯಂತೂ ಮಳೆ ನೀರಲ್ಲಿ ಸಂಪೂರ್ಣ ಮುಳುಗಿ ಹೋಗಿತ್ತು.

Related Video