Asianet Suvarna News Asianet Suvarna News

ಕಾಫಿನಾಡಲ್ಲಿ ಭಾರೀ ಮಳೆ, ಹೆಬ್ಬಾಳೆ ಸೇತುವೆ ಮುಳುಗಡೆ, ಕಳಸ-ಹೊರನಾಡು ಸಂಪರ್ಕ ಕಡಿತ

ರಾಜ್ಯದಲ್ಲಿ ಮತ್ತೆ ಮಳೆ ಸುರಿಯಲು ಪ್ರಾರಂಭವಾಗಿದ್ದು ನದಿಗಳು ತುಂಬುತ್ತಿವೆ. ಭದ್ರೆ ಅಪಾಯದ ಮಟ್ಟ ಮೀರಿ ಹರಿಯಲು ಶುರು ಮಾಡಿದ್ದಾಳೆ. ಕಳಸ- ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಮುಳುಗಡೆ ಸೇತುವೆ ಎಂದೇ ಈ ಸೇತುವೆ ಹೆಸರು ಪಡೆದಿದೆ. 

ಬೆಂಗಳೂರು (ಸೆ. 20): ರಾಜ್ಯದಲ್ಲಿ ಮತ್ತೆ ಮಳೆ ಸುರಿಯಲು ಪ್ರಾರಂಭವಾಗಿದ್ದು ನದಿಗಳು ತುಂಬುತ್ತಿವೆ. ಭದ್ರೆ ಅಪಾಯದ ಮಟ್ಟ ಮೀರಿ ಹರಿಯಲು ಶುರು ಮಾಡಿದ್ದಾಳೆ. ಕಳಸ- ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಮುಳುಗಡೆ ಸೇತುವೆ ಎಂದೇ ಈ ಸೇತುವೆ ಹೆಸರು ಪಡೆದಿದೆ. 

ಕೊಟ್ಟಿಗೆಹಾರ, ನಿಡುವಾಳೆ, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭದ್ರೆ ಹೊಲಗಳಿಗೆ, ಜಮೀನಿಗೆ ನುಗ್ಗುವ ಭೀತಿ ಇದ್ದು ರೈತರು ತಮ್ಮ ಬೆಳೆ ನಾಶವಾಗಬಹುದು ಎಂಬ ಆತಂಕದಲ್ಲಿದ್ದಾರೆ. 

ಮಳೆರಾಯ ನಿನ್ನ ಮನೆಕಾಯ! ರಾಜ್ಯದಾದ್ಯಂತ ಮತ್ತೆ ಧಾರಾಕಾರ ಮಳೆ ಶುರು

Video Top Stories