ಆಕ್ಸಿಜನ್ ಸಮಸ್ಯೆ ಮೂಲ ಹೇಳಿದ ಡಾ. ಸುಧಾಕರ್.. ಎಲ್ಲ ಬಗೆಹರಿಯಲಿದೆ

ಆಕ್ಸಿಜನ್ ಸಿಗದೆ ರೊಗಿಗಳ ಸಾವು/ ಶೃಂಗೇರಿಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯೆ/ ನರ್ಸಿಂಗ್ ಹೋಂ ನಲ್ಲಿ ಸಣ್ಣ ಸಿಲಿಂಡರ್ ಇಟ್ಟುಕೊಂಡಿರುತ್ತಾರೆ/ ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ

First Published Apr 20, 2021, 5:17 PM IST | Last Updated Apr 20, 2021, 5:40 PM IST

ಚಿಕ್ಕಮಗಳೂರು(ಏ. 20)  ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತ ಇದೆ. ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಹಾಗಾದರೆ ಸರ್ಕಾರ ಇದರ ಪರಿಹಾರಕ್ಕೆ ತೆಗೆದುಕೊಂಡ ಕ್ರಮ ಏನು? ಆರೋಗ್ಯ ಸಚಿವ  ಡಾ. ಕೆ. ಸುಧಾಕರ್ ಅವರೇ  ಉತ್ತರ ಕೊಟ್ಟಿದ್ದಾರೆ.

ಆಕ್ಸಿಜನ್ ಸಿಗದೆ ಸಾವನ್ನಪ್ಪಿದ  ಒಂದೆರಡು ಪ್ರಕರಣಗಳು ಆಗಿರಬಹುದು ನಾನು ಇಲ್ಲ ಅಂತ ಹೇಳಲ್ಲ ಎಂದು ಸುಧಾಕರ್ ಸತ್ಯ ಒಪ್ಪಿಕೊಂಡಿದ್ದಾರೆ. ಇದೇ ರೀತಿ ಪ್ರಕರಣಗಳು ಹೆಚ್ಚಾದರೆ ಆಕ್ಸಿಜನ್ ಬಹಳಷ್ಟು ಬೇಕಾಗುತ್ತದೆ. ಸದ್ಯ ಎಸ್ಟಿಮೇಟ್ ಮಾಡಿರೋದು 1200-1500 ಮೆಟ್ರಿಕ್ ಟನ್. ಕೇಂದ್ರ ಸರ್ಕಾರ ಸದ್ಯದ ಪರಿಸ್ಥಿತಿಗೆ 300 ಮೆಟ್ರಿಕ್ ಟನ್ ನೀಡಿದೆ.

ಬೆಂಗಳೂರಿನ ನಡು ರಸ್ತೆಯಲ್ಲೇ ವ್ಯಕ್ತಿಯ ನರಳಾಟ..ಕರಾಳ ಕೊರೋನಾ

ರಾಜ್ಯದಲ್ಲಿ ಸಾವಿರಾರು ನರ್ಸಿಂಗ್ ಹೋಮ್ ಗಳಿವೆ. ಸಣ್ಣ ನರ್ಸಿಂಗ್ ಹೋಮಲ್ಲಿ ಸಣ್ಣ ಸಿಲಿಂಡರ್ ಇಟ್ಟುಕೊಂಡಿರುತ್ತಾರೆ. ಸಣ್ಣ ಸಿಲಿಂಡರ್ ಇದ್ರೆ ಮೂರು ಬಾರಿ ಚೇಂಜ್ ಮಾಡಬೇಕಾಗುತ್ತದೆ. ಈ ರೀತಿಯ ನ್ಯೂನತೆಗಳಿವೆ, ತಾಂತ್ರಿಕ ಸಮಸ್ಯೆ ಇದೆ. ಲಿಕ್ವಿಡ್ ಪ್ಲಾಂಟ್ಸ್ ಇರುವಂತಹ ಆಸ್ಪತ್ರೆಗಳು ಆಗಬೇಕು. ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.