ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಕ್ಕೆ ವಿರೋಧ: ನಮ್ಮ ಜಿಲ್ಲೆಯಲ್ಲಿ ಆ ರೀತಿ ಆಗೋದಕ್ಕೆ ಬಿಡಲ್ಲ: ಎಚ್ಡಿಕೆ

*  ರೇವಣ್ಣ ಜತೆ ಮಾತನಾಡಿದ್ದೇನೆ, ಟೆಂಡರ್‌ದಾರರ ಜತೆಯೂ ಮಾತನಾಡಲಾಗುತ್ತೆ
*  ಹಿಂದಿನಿಂದ ಬಂದ ಸಂಪ್ರದಾಯ ಮುಂದುವರೆಸಬೇಕು
*  ಈ ವಿಚಾರಕ್ಕೆ ಸಿಎಂ ಮೌನ ಮುರೀಬೇಕು ಅಂತ ಕೇಳಿದ್ದೆ: ಹೆಚ್‌ಡಿಕೆ
 

First Published Apr 12, 2022, 12:53 PM IST | Last Updated Apr 12, 2022, 12:53 PM IST

ಮೈಸೂರು(ಏ.12): ಹಾಸನ ಜಿಲ್ಲೆಯ ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂರ ವ್ಯಾಪಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಹಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ನಗರದ ಚಾಮುಂಡಿಬೆಟ್ಟದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಎಚ್‌ಡಿಕೆ, ನಮ್ಮ ಜಿಲ್ಲೆಯಲ್ಲಿ ಆ ರೀತಿ ಆಗುವುದಕ್ಕೆ ಬಿಡೋದಿಲ್ಲ, ನಾನೀಗ ರೇವಣ್ಣ ಜತೆ ಮಾತನಾಡಿದ್ದೇನೆ. ಟೆಂಡರ್‌ದಾರರ ಜತೆಯೂ ಮಾತನಾಡಲಾಗುತ್ತೆ. ಹಿಂದಿನಿಂದ ಬಂದ ಸಂಪ್ರದಾಯವನ್ನ ಮುಂದುವರೆಸಬೇಕು. ಈ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೌನ ಮುರೀಬೇಕು ಅಂತ ಕೇಳಿದ್ದೆ, ಮುಸ್ಲಿಂರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡ್ತೇವೆ, ಎಲ್ಲಾ ಜಿಲ್ಲೆಗಳಲ್ಲೂ ಇದನ್ನೇ ಮಾಡಲಾಗುತ್ತದೆ ಅಂತ ಹೇಳಿದ್ದಾರೆ. 

Hassan: ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಪ್ರಶ್ನೆಯೇ ಇಲ್ಲ..!