ಹಿಮ್ಸ್‌ನಲ್ಲಿ ಬೋಧಕರ ಕೊರತೆಯಿಂದ ಕ್ಲಾಸ್‌ ಬಂದ್‌: 149 ವಿದ್ಯಾರ್ಥಿಗಳು ಪರದಾಟ

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬೋಧಕರ ಕೊರತೆಯಿದ್ದು, 149 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
 

Share this Video
  • FB
  • Linkdin
  • Whatsapp

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬೋಧಕರ ಕೊರತೆಯಿಂದ ಕ್ಲಾಸ್‌ ಬಂದ್‌ ಮಾಡಲಾಗಿದ್ದು, ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ. ಒಂದುವರೆ ತಿಂಗಳು ಕಳೆದರೂ ಪಾಠಗಳು ಆರಂಭವಾಗಿಲ್ಲ. ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಕೊರತೆ ಇದ್ದು, ವೈದ್ಯಕೀಯ ವಿದ್ಯಾರ್ಥಿಗಳಿಂದ ಡಿಸಿಗೆ ದೂರು ನೀಡಲಾಗಿದೆ. ಆರಂಭದಲ್ಲಿ 14 ದಿನ ಹಾವೇರಿ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ತಜ್ಞ ವೈದ್ಯರಿಂದ ಫೌಡೇಷನ್‌ ಕೋರ್ಸ್‌ ನಡೆದಿದೆ. ಕೆಂದ್ರ ಸರ್ಕಾರದ ಅನುದಾನದಡಿ 478 ಕೋಟಿ ಅನುದಾನದಲ್ಲಿ ದೇವಗಿರಿ ಯಲ್ಲಾಪುರ ಬಳಿ 56 ಎಕರೆ ಜಾಗದಲ್ಲಿ ಹಿಮ್ಸ್ ನಿರ್ಮಾಣ ಮಾಡಲಾಗಿದೆ.

Related Video