ಆಟ ನಿಲ್ಲಿಸಿದ ಹಾವೇರಿ ಡಾನ್‌ 111... ಸಂಕ್ರಾಂತಿ ಹಬ್ಬಕ್ಕೆ ಸೂತಕದ ಛಾಯೆ

ಡಾನ್‌ 111 ಇನ್ನಿಲ್ಲ. ಹಾವೇರಿ ಜಿಲ್ಲೆಯಲ್ಲಿ ಸಂಕ್ರಾಂತಿ ಬಂದರೆ ಸಾಕು ತಿಂಗಳು ಪೂರ್ತಿ ಹಬ್ಬವೇ ಹಬ್ಬ ಆದರೆ ಹಾವೇರಿ ಹೋರಿ ಹಬ್ಬಕ್ಕೆ ಈ ಬಾರಿ ಸಂಕ್ರಾಂತಿ ಸಿಹಿ ಇಲ್ಲ  ಏಕೆಂದರೆ ಹಾವೇರಿಯ ಜನ ಮೆಚ್ಚುಗೆಯ ಹೋರಿ ಡಾನ್‌ 111 ಅಸುನೀಗಿದೆ.

First Published Jan 13, 2022, 8:44 PM IST | Last Updated Jan 13, 2022, 9:10 PM IST

ಹಾವೇರಿ:  ಡಾನ್‌ 111 ಇನ್ನಿಲ್ಲ. ಹಾವೇರಿ ಜಿಲ್ಲೆಯಲ್ಲಿ ಸಂಕ್ರಾಂತಿ ಬಂದರೆ ಸಾಕು ತಿಂಗಳು ಪೂರ್ತಿ ಹಬ್ಬವೇ ಹಬ್ಬ ಆದರೆ ಹಾವೇರಿ ಹೋರಿ ಹಬ್ಬಕ್ಕೆ ಈ ಬಾರಿ ಸಂಕ್ರಾಂತಿ ಸಿಹಿ ಇಲ್ಲ  ಏಕೆಂದರೆ ಹಾವೇರಿಯ ಜನ ಮೆಚ್ಚುಗೆಯ ಹೋರಿ ಡಾನ್‌ 111 ಅಸುನೀಗಿದ್ದು, ಇದರಿಂದ ಇಲ್ಲಿನ ಹೋರಿ ಹಬ್ಬಕ್ಕೆ ಸೂತಕದ ಛಾಯೆ ಆವರಿಸಿದೆ.  ಹಾವೇರಿ ಡಾನ್ ಅಖಾಡಕ್ಕಿಳಿಯಿತು ಎಂದರೆ ಎಲ್ಲರೂ ಪಕ್ಕಕೆ ಸರಿಯಬೇಕಾಗಿತ್ತು. ಹೋರಿ ಸ್ಪರ್ಧೆಗೆ ಹಾವೇರಿ ಡಾನ್‌ ಕಾಲಿಟ್ಟರೆ ಸಾಕು. ಅಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಾನಗಲ್, ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸಿ ಇದು ಪ್ರಥಮ ಬಹುಮಾನ ಗಳಿಸಿತ್ತು. 

ನೋಟದಲ್ಲೇ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾ, ಸಹಸ್ರಾರು ಜನರ ನಡುವೆ ಮಿಂಚಿನ ವೇಗದಲ್ಲಿ ಮುನ್ನುಗುತ್ತಿದ್ದ ಇದು ಕೊರಳಿಗೆ ಕಟ್ಟಿದ ಕೊಬ್ಬರಿ ಹರಿಯಲು ಒಮ್ಮೆಯೂ ಅವಕಾಶ ಮಾಡಿ ಕೊಟ್ಟಿರಲಿಲ್ಲ. ಅಂತಹ ಹೋರಿ ಮಂಗಳವಾರ ತನ್ನ ಕೊನೆ ಆಟ ಮುಗಿಸಿದ್ದು ಅಭಿಮಾನಿಗಳನ್ನು ದುಃಖದ ಕಡಲಲ್ಲಿ ತೇಲಿಸಿದೆ.