Asianet Suvarna News Asianet Suvarna News

ಬ್ಯಾಡಗಿ ಮೆಣಸಿನಕಾಯಿಗೆ ಬಂಗಾರದ ಬೆಲೆ; ರೈತನಿಗೆ ಹೂಮಾಲೆ

ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ವಿಶ್ವಪ್ರಸಿದ್ಧ ಮೆನಸಿಣಕಾಯಿ ಮಾರುಕಟ್ಟೆಯಲ್ಲಿ ಈ ಬಾರಿ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಂತಾಗಿದೆ. ಈ ಬಾರಿ ರೈತರ ಮೆಣಸಿನಕಾಯಿ ಬಾರಿ ಬೆಲೆಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ಬರೆದಿದೆ.

ಹಾವೇರಿ (ಜ. 01): ಜಿಲ್ಲೆಯ ಬ್ಯಾಡಗಿ ಪಟ್ಟಣದ ವಿಶ್ವಪ್ರಸಿದ್ಧ ಮೆನಸಿಣಕಾಯಿ ಮಾರುಕಟ್ಟೆಯಲ್ಲಿ ಈ ಬಾರಿ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಂತಾಗಿದೆ. ಈ ಬಾರಿ ರೈತರ ಮೆಣಸಿನಕಾಯಿ ಬಾರಿ ಬೆಲೆಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ಬರೆದಿದೆ.

 ಗದಗ ಬೆಟಗೇರಿಯ ಓರ್ವ ರೈತನ ಮೆಣಸಿನಕಾಯಿಗೆ ಕ್ವಿಂಟಲ್ ಗೆ 50111 ರುಪಾಯಿಗೆ ಮಾರಾಟವಾಗಿದ್ದು ಇದು ಸರ್ವಕಾಲಿಕ ದಾಖಲೆಯಾಗಿದೆ. ರೈತ ಮಲ್ಲಿಕಾರ್ಜುನ ತಂದಿದ್ದ ಗುಣಮಟ್ಟದ ಮೆಣಸಿನಕಾಯಿ ಇಷ್ಟೊಂದು ಬೆಲೆಗೆ ಮಾರಾಟವಾಗಿ ಹಿಂದಿನ ದಾಖಲೆಗಳನ್ನು ಮುರಿದು ಹೊಸ ದಾಖಲೆ ಮಾಡಿದೆ. 

ರೈತ ಮಲ್ಲಿಕಾರ್ಜುನ ಸುಮಾರು ಮೂರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಈಗ ಮೊದಲನೆ ಕಟಾವ್ ನಲ್ಲಿ 10 ಚೀಲ ಮೆನಸಿಣಕಾಯಿ ತೆಗೆದುಕೊಂಡು ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದರು. ಅದರಲ್ಲಿ ಮೂರು ಚೀಲ 50111 ರುಪಾಯಿಗೆ ಮಾರಾಟವಾಗಿದೆ.