ನಾಯಕರಿಗೆ ಬಿಸಿ.. ಕಸ್ತೂರಿ ರಂಗನ್ ವರದಿ ವಿರೋಧಿಸಿ ಚುನಾವಣೆ ಬಹಿಷ್ಕಾರ!

ಗ್ರಾ.ಪಂ ಚುನಾವಣೆ ಬಹಿಷ್ಕಾರದ ಎಚ್ಚರಿಕೆ/ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ  ಕಸ್ತೂರಿ ರಂಗನ್  ವರದಿ ವಿರೋಧಿ ಹೋರಾಟ/ ಕಸ್ತೂರಿ ರಂಗನ್  ವರದಿಯಿಂದ ನೆಲೆ ಕಳೆದುಕೊಳ್ಳೋ ಆತಂಕದಿಂದ ಕಾಫಿ ಬೆಳೆಗಾರರ ಪ್ರತಿಭಟನೆ/ ಹಾನುಬಾಳು ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ತೀವ್ರ ಹೋರಾಟ

First Published Dec 7, 2020, 8:12 PM IST | Last Updated Dec 7, 2020, 8:15 PM IST

ಹಾಸನ(ಡಿ. 07)  ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ  ಕಸ್ತೂರಿ ರಂಗನ್  ವರದಿ ವಿರೋಧಿ ಹೋರಾಟ ತೀವ್ರವಾಗಿದೆ.  ಕಸ್ತೂರಿ ರಂಗನ್  ವರದಿಯಿಂದ ನೆಲೆ ಕಳೆದುಕೊಳ್ಳೋ ಆತಂಕದಿಂದ ಕಾಫಿ ಬೆಳೆಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಲೆನಾಡಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ..ಈ ವರದಿ ಬೇಡವೇ ಬೇಡ

ಹಾನುಬಾಳು ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ತೀವ್ರ ಹೋರಾಟ ನಡೆಸಿದ್ದಾರೆ. ಹಾನುಬಾಳ್- ಮೂಡಿಗೆರೆ ರಸ್ತೆಯಲ್ಲಿ ಒಂದು ಗಂಟೆ ಧರಣಿ ಕುಳಿತ ನೂರಾರು ಜನ ವರದಿಯಲ್ಲಿ ಮಾರ್ಪಾಡು ಮಾಡದಿದ್ದರೆ ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ. ಅಚ್ಚನಹಳ್ಳಿ,ಮರಗುಂದ,ಅಗನಿ, ಕುಮಾರಹಳ್ಳಿ,ಹೊಡಚನಹಳ್ಳಿ ಕಾಡುಮನೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದು ಗ್ರಾಮ ಪಂಚಾಯಿತಿ ಚುನಾವಣೆ ಬಹುಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.