ಹೈಕೋರ್ಟ್ ಚಾಟಿ, ಮಂಗಗಳ ಮಾರಣ ಹೋಮ ಸ್ಥಳಕ್ಕೆ ಅಧಿಕಾರಿಗಳ ಭೇಟಿ
* 30 ಮಂಗಗಳ ದಾರುಣ ಹತ್ಯೆ
* ಮೂಕ ಪ್ರಾಣಿಗಳ ಮೇಲೆ ಮಾನವನ ಪೈಶಾಚಿಕ ಕೃತ್ಯ
* ಹೈಕೋರ್ಟ್ ನಿರ್ದೇಶನ ಹಿನ್ನೆಲೆ ಚುರುಕಾದ ತನಿಖೆ
* ಘಟನಾ ಸ್ಥಳಕ್ಕೆ ಡಿಸಿ ಆರ್. ಗಿರೀಶ್,ಎಸ್ಪಿ ಶ್ರೀನಿವಾಸಗೌಡ, ಡಿಸಿಎಫ್ ಬಸವರಾಜ್ ಭೇಟಿ
ಹಾಸನ(ಜು. 31) ಹಾಸನ ಜಿಲ್ಲೆಯಲ್ಲೊಂದು ದಾರುಣ ಘಟನೆ ನಡೆದಿದೆ. ಮೂಕ ಪ್ರಾಣಿಗಳ ಮಾರಣ ಹೋಮ ಮಾಡಲಾಗಿದೆ. 30 ಮಂಗಗಳು ಸಾವು ಕಂಡಿದ್ದು 30 ಮಂಗಗಳ ಸ್ಥಿತಿ ಗಂಭೀರವಾಗಿದೆ. ಈ ಪ್ರಕರಣವನ್ನು ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದೆ.
ಘಟನಾ ಸ್ಥಳಕ್ಕೆ ಡಿಸಿ ಆರ್. ಗಿರೀಶ್,ಎಸ್ಪಿ ಶ್ರೀನಿವಾಸಗೌಡ, ಡಿಸಿಎಫ್ ಬಸವರಾಜ್ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ತಾಲ್ಲೂಕಿನ ಚೌಡನಹಳ್ಳಿ ಬಳಿ ಕೊಂದಿದ್ದ 39 ಮಂಗಗಳ ಚೀಲ ಕಟ್ಟಿ ಎಸೆಯಲಾಗಿತ್ತು.