ಹಾಸನ; ಮೂಕ ಪ್ರಾಣಿಗಳ ಮೇಲೆ ದೌರ್ಜನ್ಯ, ಮಂಗಗಳ ಮಾರಣ ಹೋಮ
* 30 ಮಂಗಗಳ ದಾರುಣ ಹತ್ಯೆ
* ಮೂಕ ಪ್ರಾಣಿಗಳ ಮೇಲೆ ಮಾನವನ ಪೈಶಾಚಿಕ ಕೃತ್ಯ
* ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಚೌಡನಹಳ್ಳಿ ಗ್ರಾಮದಲ್ಲಿ ಘಟನೆ
* ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ
ಹಾಸನ(ಜು. 29) ಹಾಸನ ಜಿಲ್ಲೆಯಲ್ಲೊಂದು ದಾರುಣ ಘಟನೆ ನಡೆದಿದೆ. ಮೂಕ ಪ್ರಾಣಿಗಳ ಮಾರಣ ಹೋಮ ಮಾಡಲಾಗಿದೆ. 30 ಮಂಗಗಳು ಸಾವು ಕಂಡಿದ್ದು 30 ಮಂಗಗಳ ಸ್ಥಿತಿ ಗಂಭೀರವಾಗಿದೆ.
ಅಗಲಿದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ
ರಾತ್ರೋ ರಾತ್ರಿ ಮಂಗಗಳನ್ನು ಕೊಂದು ರಸ್ತೆಯಲ್ಲಿ ಬಿಸಾಡಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಚೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಗಗಳನ್ನ ಕೊಂದು ನಡು ರಾತ್ರಿ ಕಾರಿನಲ್ಲಿ ತಂದು ಬಿಸಾಡಿ ಹೋಗಿದ್ದಾರೆ. ಮೂಕ ಪ್ರಾಣಿಗಳ ದಾರುಣ ಹತ್ಯೆ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ನಿತ್ರಾಣಗೊಂಡಿರೋ ಮಂಗಗಳಿಗೆ ಸ್ಥಳೀಯರು ಆರೈಕೆ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಂತಕರ ಪತ್ತೆಗೆ ಮಾಹಿತಿ ಸಂಗ್ರಹಿಸಿದ್ದಾರೆ.