ಶಾಸಕ ರೇವಣ್ಣ ಬದಲಿಸಲು ಹಾಸನಾಂಬೆ ಮುಂದೆ ಕೋರಿಕೆ : ಹುಂಡಿಯಲ್ಲಿ ಡಿಫರೆಂಟ್ ಪತ್ರ

 ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲ ಜಾತ್ರೋತ್ಸವ ಮುಕ್ತಾಯವಾಗಿದ್ದು, ಬಾಗಿಲು ಮುಚ್ಚಲಾಗಿದೆ. ಇನ್ನು ಜಾತ್ರೆ ಮುಕ್ತಾಯವಾದ ಹಿನ್ನೆಲೆ ಹಾಸನಾಂಬೆ ದೇವಿಯ ಹುಂಡಿಯನ್ನು ತೆರೆದಿದ್ದು, ಸಂಗ್ರಹವಾದ ಭಕ್ತರ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತದೆ. 

ಹಾಸನಾಂಬೆ ದೇವಿಯ ಕಾಣಿಕೆ ಡಬ್ಬವನ್ನು ತೆರೆದಾಗ ಹಣದ ಜೊತೆಗೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಭಕ್ತರ ಬೇಡಿಕೆ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. ಭಕ್ತರ ವಿವಿಧ ಬೇಡಿಕೆಗಳನ್ನು ಚೀಟಿಯಲ್ಲಿ ಬರೆದು ದೇವಿಯ ಕಾಣಿಕೆ ಹುಂಡಿಗೆ ಹಾಕುವ ಮೂಲಕ ತಮ್ಮ ಕೋರಿಕೆ ಈಡೇರಿಸುವಂತೆ ಕೋರಿದ್ದಾರೆ.  ಪ್ರಮುಖವಾಗಿ ನಾನು ಇಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಲಿ, ಹೊಳೆನರಸೀಪುರ ಶಾಸಕರನ್ನು ಬದಲಿಸು, ಪ್ರಮೋಷನ್ ಸಿಗಲಿ, ಮದುವೆಯಾಗಲಿ, ಮದುವಾಗಲಿ ಎನ್ನುವಂತೆ ವಿವಿಧ ಬೇಡಿಕೆ ಪತ್ರಗಳು ದೊರಕಿವೆ. ಹಾಸನದ ರಸ್ತೆ ರಿಪೇರಿ ಆಗಲಿ, ಗಂಡು ಮಗು ಜನಿಸಲಿ, ಪ್ರಮೋಷನ್ ಸಿಗಲಿ, ನನ್ನ ಕೋರಿಕೆ ಈಡೇರಿದರೆ 5 ಸಾವಿರ ಕೊಡುತ್ತೇನೆ ಎನ್ನುವಂತ ಚಿತ್ರ - ವಿಚಿತ್ರ ಬೇಡಿಕೆಗಳನ್ನು ಒಳಗೊಂಡ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. 

First Published Nov 8, 2021, 2:57 PM IST | Last Updated Nov 8, 2021, 2:57 PM IST

ಹಾಸನ (ನ.08):  ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲ ಜಾತ್ರೋತ್ಸವ ಮುಕ್ತಾಯವಾಗಿದ್ದು, ಬಾಗಿಲು ಮುಚ್ಚಲಾಗಿದೆ. ಇನ್ನು ಜಾತ್ರೆ ಮುಕ್ತಾಯವಾದ ಹಿನ್ನೆಲೆ ಹಾಸನಾಂಬೆ ದೇವಿಯ ಹುಂಡಿಯನ್ನು ತೆರೆದಿದ್ದು, ಸಂಗ್ರಹವಾದ ಭಕ್ತರ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತದೆ. 

Hasanamba Temple: 10 ದಿನಗಳ ಬಳಿಕ ಮುಚ್ಚಿದ ಬಾಗಿಲು, ಮುಂದಿನ ವರ್ಷವೇ ಹಾಸನಾಂಬೆ ದರ್ಶನ

ಹಾಸನಾಂಬೆ ದೇವಿಯ ಕಾಣಿಕೆ ಡಬ್ಬವನ್ನು ತೆರೆದಾಗ ಹಣದ ಜೊತೆಗೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಭಕ್ತರ ಬೇಡಿಕೆ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. ಭಕ್ತರ ವಿವಿಧ ಬೇಡಿಕೆಗಳನ್ನು ಚೀಟಿಯಲ್ಲಿ ಬರೆದು ದೇವಿಯ ಕಾಣಿಕೆ ಹುಂಡಿಗೆ ಹಾಕುವ ಮೂಲಕ ತಮ್ಮ ಕೋರಿಕೆ ಈಡೇರಿಸುವಂತೆ ಕೋರಿದ್ದಾರೆ.  

ಪ್ರಮುಖವಾಗಿ ನಾನು ಇಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಲಿ, ಹೊಳೆನರಸೀಪುರ ಶಾಸಕರನ್ನು ಬದಲಿಸು, ಪ್ರಮೋಷನ್ ಸಿಗಲಿ, ಮದುವೆಯಾಗಲಿ, ಮguವಾಗಲಿ ಎನ್ನುವಂತೆ ವಿವಿಧ ಬೇಡಿಕೆ ಪತ್ರಗಳು ದೊರಕಿವೆ. ಹಾಸನದ ರಸ್ತೆ ರಿಪೇರಿ ಆಗಲಿ, ಗಂಡು ಮಗು ಜನಿಸಲಿ, ಪ್ರಮೋಷನ್ ಸಿಗಲಿ, ನನ್ನ ಕೋರಿಕೆ ಈಡೇರಿದರೆ 5 ಸಾವಿರ ಕೊಡುತ್ತೇನೆ ಎನ್ನುವಂತ ಚಿತ್ರ - ವಿಚಿತ್ರ ಬೇಡಿಕೆಗಳನ್ನು ಒಳಗೊಂಡ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ.