ಮಳಲಿ ಮಸೀದಿ ವಿವಾದ ಸಂಬಂಧ ತಾಂಬೂಲ ಪ್ರಶ್ನೆಯಲ್ಲಿ ಶಿವ ಸಾನಿಧ್ಯ ಪತ್ತೆ ಬೆನ್ನಲ್ಲೇ ಮಳಲಿ ಮಸೀದಿಯಲ್ಲಿರೋದು ದೇವಸ್ಥಾನವೋ? ಅಥವಾ ಮಠವೋ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಇಲ್ಲಿದ್ದ ಮಠ ಟಿಪ್ಪು ಸುಲ್ತಾನ್ ಸಹಚರನ ದಾಳಿಯಿಂದ ನಾಶವಾಯ್ತಾ ಎಂಬ ಸ್ಪೋಟಕ ಸತ್ಯವೊಂದು ಇತಿಹಾಸ ಪುಸ್ತಕದಿಂದ ಬೆಳಕಿಗೆ ಬಂದಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು: ಮಳಲಿ ಮಸೀದಿ ಜಾಗದಲ್ಲಿದ್ದ ಶೈವ ಸಂಪ್ರದಾಯದ ಮಠಕ್ಕೆ ಟಿಪ್ಪು ಸಹಚರ ದಾಳಿ ನಡೆಸಿದ್ದು, ಟಿಪ್ಪು ಸಹಚರ ಶೇಖ್ ಆಲಿ ನವಾಬನಿಂದ ಮಳಲಿ ಮಠದ ಮೇಲೂ ದಾಳಿಯಾಗಿದೆ ಎನ್ನಲಾಗಿದೆ. ಗುರುಪುರದ ಜಂಗಮ ಲಿಂಗಾಯತ ಮಠದ ಪುಸ್ತಕದಲ್ಲಿ ಈ ಸ್ಪೋಟಕ ಸತ್ಯ ಬಹಿರಂಗಗೊಂಡಿದೆ. 2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿದೆ ಟಿಪ್ಪು ಸಹಚರನ ದಾಳಿಯ ಉಲ್ಲೇಖವಿದ್ದು, ಗುರುಪುರದ ಜಂಗಮ ಲಿಂಗಾಯತ ಮಠದಿಂದ ಪ್ರಕಟಗೊಂಡ ಪುಸ್ತಕ ಇದಾಗಿದೆ. ಕೆಳದಿ ಅರಸರ ಬಳಿಕ ಮಳಲಿ ಪ್ರಾಂತ್ಯದಲ್ಲಿ ಟಿಪ್ಪು ಆಳ್ವಿಕೆ ನಡೆಸಿದ್ದು, ಈ ವೇಳೆ ಟಿಪ್ಪು ಸಹಚರನಿಂದ ಲಿಂಗಾಯತ ಜಂಗಮ ಮಠದ ಹಲವು ಮಠಗಳ ಮೇಲೆ ದಾಳಿ ನಡೆದಿದೆ. ಮಂಗಳೂರಿನಲ್ಲಿ 48 ಲಿಂಗಾಯತ ಮಠಗಳ ಪೈಕಿ 21 ಮಠಗಳು ನಾಶವಾಗಿದ್ದು, ಇದೇ ದಾಳಿಗೆ ತುತ್ತಾಗಿ ಮಸೀದಿ ಜಾಗದ ಲಿಂಗಾಯತ ಮಠವೂ ನಾಶವಾದ ಶಂಕೆ ವ್ಯಕ್ತವಾಗಿದೆ. ಮಳಲಿ ಮಸೀದಿಯಲ್ಲಿ ಪತ್ತೆಯಾಗಿದ್ದು ಲಿಂಗಾಯತ ಸಂಪ್ರದಾಯಕ್ಕೆ ಸೇರಿದ ಶೈವ ಮಠ ಎಂಬ ಚರ್ಚೆ ಶುರುವಾಗಿದೆ. ಗುರುಪುರದ ಜಂಗಮ ಲಿಂಗಾಯತ ಮಠದ ರುದ್ರಮುನಿ ಸ್ವಾಮೀಜಿಯಿಂದಲೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ತಾಂಬೂಲ ಪ್ರಶ್ನೆಯಲ್ಲೂ ಶೈವ ಸಂಪ್ರದಾಯದ ಶಿವ ಸಾನಿಧ್ಯ ಇರೋ ಮಾಹಿತಿ ಸಿಕ್ಕಿದೆ. ಇನ್ನು ಮಳಲಿ ಮಸೀದಿ ವಾಸ್ತುಶಿಲ್ಪ ಮತ್ತು ಗುರುಪುರ ಲಿಂಗಾಯತ ಜಂಗಮ ಮಠದ ವಾಸ್ತುಶಿಲ್ಪಕ್ಕೂ ಸಾಮ್ಯತೆ ಇರೋದು ಬೆಳಕಿಗೆ ಬಂದಿದೆ. ಮೇಲ್ಛಾವಣಿ, ಬಾಗಿಲುಗಳ ಶಿಲ್ಪಕಲೆಗಳಲ್ಲಿ ಭಾರೀ ಸಾಮ್ಯತೆ ಇದ್ದು, ಮಳಲಿಯ ಶೈವ ಮಠಕ್ಕೆ ದಾಳಿ ನಡೆಸಿ ಟಿಪ್ಪು ಮಸೀದಿ ಕಟ್ಟಿದನಾ ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಪಠ್ಯದ ಬಗ್ಗೆ ಬರಗೂರು ಒಪ್ಪಿದರೆ ಮುಖಾಮುಖಿ ಚರ್ಚೆಗೆ ಸಿದ್ಧ: ಸಚಿವ ನಾಗೇಶ್
ವಿಎಚ್ ಪಿ ಸೌಹಾರ್ದತೆ ಹೆಜ್ಜೆ!
ಅಷ್ಟಮಂಗಳ ಪ್ರಶ್ನೆಗೂ ಮುನ್ನ ಸೌಹಾರ್ದತೆಯ ಹೆಜ್ಜೆಯಿಡಲು ಮುಂದಾಗಿರೋ ವಿಎಚ್ ಪಿ, ಹೊಸ ಸಮಿತಿ ರಚಿಸಿ ಮಳಲಿ ಮಸೀದಿ ಪ್ರಮುಖರ ಭೇಟಿಗೆ ಯೋಜನೆ ರೂಪಿಸಿದೆ. ಅಷ್ಟಮಂಗಳ ಪ್ರಶ್ನೆಗೂ ಮುನ್ನ ಸಮಿತಿ ರಚಿಸಿ ಮಳಲಿ ಮಸೀದಿ ಭೇಟಿಗೆ ಚಿಂತನೆ ನಡೆಸಿದೆ. ಸೌಹಾರ್ದತೆಯ ಹೆಜ್ಜೆಯಿಡಲು ಮುಂದಾಗಿರೋ ವಿಶ್ವಹಿಂದೂ ಪರಿಷತ್, ಮಸೀದಿ ಪ್ರಮುಖರನ್ನ ಭೇಟಿಯಾಗಿ ಮನವಿ ಮಾಡಲು ನಿರ್ಧಾರಿಸಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿಕೆ ನೀಡಿದ್ದು, ತಾಂಬೂಲ ಪ್ರಶ್ನೆ ಮೂಲಕ ಮಳಲಿಯ ಹಿಂದೂಗಳನ್ನ ಒಟ್ಟುಗೂಡಿಸಿ ಮುಂದೆ ಅಷ್ಟಮಂಗಳಕ್ಕಾಗಿ ಗ್ರಾಮಸ್ಥರನ್ನೇ ಸೇರಿಸಿ ಸಮಿತಿ ರಚಿಸಲು ಮುಂದಾಗಿದ್ದಾರೆ. ಮಳಲಿ ಗ್ರಾಮಸ್ಥರು, ಧಾರ್ಮಿಕ ಮುಖಂಡರು, ಹಿರಿಯರ ಹೊಸ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ಗೋಚರವಾಗಿರುವುದು ವೀರಶೈವ ಮಠದ ಕುರುಹುವೇ?
ವಿಎಚ್ ಪಿ ರಾಷ್ಟ್ರೀಯ ನಾಯಕರಿಂದ ಬೆಂಬಲ:
ಮಳಲಿ ಮಸೀದಿ ಹೋರಾಟಕ್ಕೆ ವಿಎಚ್ ಪಿ ರಾಷ್ತ್ರೀಯ ನಾಯಕರು ಬೆಂಬಲ ಸೂಚಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರ ಕುಮಾರ್ ಜೈನ್ ಬೆಂಬಲ ನೀಡಿದ್ದಾರೆ. ಕರ್ನಾಟಕದ ಮಂಗಳೂರಿನ ಮಳಲಿಯಲ್ಲಿ ಮಂದಿರ ಕೆಡವಿ ಮಸೀದಿ ಕಟ್ಟಿರೋದು ಗೊತ್ತಾಗಿದೆ. ವಿವಾದಿತ ಮಸೀದಿಯಲ್ಲಿ ಮಂದಿರದ ಅವಶೇಷಗಳು ಸಿಕ್ಕಿದ್ದು, ಇತಿಹಾಸದ ಪುಸ್ತಕದಲ್ಲೂ ದಾಖಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಸರ್ವೇ ನಡೆಸಿ ಸತ್ಯ ಹೊರ ತರಬೇಕು. ಇಡೀ ಜಗತ್ತಿಗೆ ಮಂದಿರ ಕೆಡವಿ ಮಸೀದಿ ಕಟ್ಟಿದ ಇತಿಹಾಸ ಗೊತ್ತಾಗಬೇಕು. ಮುಸ್ಲಿಂ ಸಮಾಜ ಈ ವಿಚಾರದಲ್ಲಿ ಒಂದೊಳ್ಳೆ ನಿಲುವು ಪ್ರಕಟಿಸಲಿ. ಮಂದಿರ ಕೆಡವಿ ಕಟ್ಟಿದ ಮಸೀದಿಗಳನ್ನು ಹಿಂದೂಗಳಿಗೆ ಒಪ್ಪಿಸಲಿ ಎಂದಿದ್ದಾರೆ.
