ಗ್ರೀನ್ ಝೋನ್‌ನಲ್ಲಿ ಯಾವುದಕ್ಕೆ ವಿನಾಯ್ತಿ.? ರಾಯಚೂರಲ್ಲಿ ಏನೇನ್ ಸಿಗುತ್ತೆ..?
ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಲಾಕ್‌ಡೌನ್| ಸಲೂನ್, ಶಾಪಿಂಗ್ ಮಾಲ್ ಹೊರತು ಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನ ತೆರೆಯಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ| ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಕೈಗಾರಿಕೆಗಳನ್ನ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ|
ರಾಯಚೂರು(ಏ.29): ರಾಜ್ಯದ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಸ್ವಲ್ಪ ಮಟ್ಟಿಗೆ ಲಾಕ್‌ಡೌನ್ ಸಡಿಲಿಕೆ ಮಾಡಿದೆ. ಇಂದಿನಿಂದ(ಬುಧವಾರ) ಜಿಲ್ಲಾದ್ಯಂತ ಸಲೂನ್, ಶಾಪಿಂಗ್ ಮಾಲ್ ಹೊರತು ಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನ ತೆರೆಯಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
ಭಾರತ-ಕೊಲ್ಲಿ ರಾಷ್ಟ್ರಗಳ ನಡುವೆ ಕೊಳ್ಳಿ ಇಟ್ಟವರು ಯಾರು..?
ಹೀಗಾಗಿ ಜಿಲ್ಲೆಯ ಜನತೆ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಕೈಗಾರಿಕೆಗಳನ್ನ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಯಚೂರು ಜಿಲ್ಲೆಯಲ್ಲಿ ಇದೂವರೆಗೂ ಒಂದು ಕೊರೋನಾ ಪಾಸಿಟಿವ್ ಕೇಸ್‌ಗಳಿಲ್ಲ. ಹೀಗಾಗಿ ರಾಯಚೂರು ಜಿಲ್ಲೆ ಗ್ರೀನ್ ಝೋನ್‌ನಲ್ಲಿದೆ.