
KSRTC ಬಸ್‌ಗೆ ಮುಗಿಬಿದ್ದ ಪ್ರಯಾಣಿಕರು: ಮುಂಗಡ ಟಿಕೆಟ್ ಖರೀದಿಸಿದವರಿಗೆ ಮಾತ್ರ ಅವಕಾಶ..!
ಸಾರಿಗೆ ಸಂಚಾರ ಆರಂಭ| ಹುಬ್ಬಳ್ಳಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬೆಳಿಗ್ಗೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರು ಜನರು| ವಿಜಯಪುರದಲ್ಲಿ ಇಂದು ಹೆಚ್ಚಾಗಿ ಪ್ರಯಾಣಿಕರು ಬಸ್ ನಿಲ್ದಾಣದತ್ತ ಆಗಮಿಸುತ್ತಿದ್ದಾರೆ| ಬಸ್ ಹತ್ತುವ ಮುನ್ನ ಎಲ್ಲ ಪ್ರಯಾಣಿಕರಿಗೆ ಸ್ಕ್ರೀನಿಂಗ್|
ಹುಬ್ಬಳ್ಳಿ/ವಿಜಯಪುರ(ಮೇ.20): ರಾಜ್ಯಾದ್ಯಂತ ಸಾರಿಗೆ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬೆಳಿಗ್ಗೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ ಈ ಭಾಗಗಳಿಗೆ ತೆರಳಲು ಪ್ರಯಾಣಿಕರು ಆಗಮಿಸುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಣಗುಡುತ್ತಿದೆ BMTC ಬಸ್ ನಿಲ್ದಾಣ, ಆದ್ರೆ KSRTC ಫುಲ್ ರಶ್..!
ಇನ್ನು ವಿಜಯಪುರದಲ್ಲಿ ನಿನ್ನೆಗಿಂತ ಇಂದು ಹೆಚ್ಚಾಗಿ ಪ್ರಯಾಣಿಕರು ಬಸ್ ನಿಲ್ದಾಣದತ್ತ ಆಗಮಿಸುತ್ತಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣದಿಂದ ಪ್ರಮುಖ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ಬಸ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಸ್ ಹತ್ತುವ ಮುನ್ನ ಎಲ್ಲ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಲಾಗುತ್ತಿದೆ.