Karnataka Rain Effect: ಹವಾಮಾನ ವೈಪರೀತ್ಯಕ್ಕೆ ಹಾಳಾದ ಬಂಗಾರದ ಬೆಳೆ: ಕಂಗಾಲಾದ ರೈತ

*  ಬೆಳೆಹಾನಿ ನೋಡಿ ಕಣ್ಣೀರಿಡುತ್ತಿರುವ ರೈತರು 
*  ಅಕಾಲಿಕ ಮಳೆ ದ್ರಾಕ್ಷಿ ಬೆಳೆ ಹಾಳು 
*  ದ್ರಾಕ್ಷಿ ಹಾಳಾಗಿದ್ದರಿಂದ ತಲೆ ಮೇಲೆ ಕೈಹೊತ್ತು ಕೂತ ರೈತ
 

Share this Video
  • FB
  • Linkdin
  • Whatsapp

ವಿಜಯಪುರ(ಡಿ.13): ಹವಾಮಾನ ವೈಪರೀತ್ಯಕ್ಕೆ ದ್ರಾಕ್ಷಿ ಬೆಳೆ ಹಾಳಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಬೆಳೆಹಾನಿಯನ್ನ ನೋಡಿದ ರೈತರು ಕಣ್ಣೀರಿಡುತ್ತಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎದುರು ರೈತ ಸೋಮಣ್ಣ ಬಸರಗಿ ಎಂಬುವರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಏಳು ಎಕರೆಯಲ್ಲಿ ಬೆಳೆದ ದ್ರಾಕ್ಷಿ ಬೆಳೆ ಅಕಾಲಿಕವಾಗಿ ಸುರಿದ ಮಳೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದಾಗಿ ರೈತ ಸೋಮಣ್ಣ ಬಸರಗಿ ಕಂಗಾಲಾಗಿ ಹೋಗಿದ್ದಾನೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ದ್ರಾಕ್ಷಿ ಹಾಳಾಗಿದ್ದರಿಂದ ರೈತ ತಲೆ ಮೇಲೆ ಕೈಹೊತ್ತು ಕೂತಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ರೈತ ಸೋಮಣ್ಣ ಬಸರಗಿ ಬದುಕು.

Anti Conversion Bill: ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಈ ಕಾಯ್ದೆಯಲ್ಲಿರೋ ಅಂಶಗಳೇನು.?

Related Video