ಜಮೀನು ವಿವಾದ: ತಹಸೀಲ್ದಾರ್ ಎದುರು ಗ್ರಾಪಂ ಸದಸ್ಯ ಆತ್ಮಹತ್ಯಗೆ ಯತ್ನ
ನ್ಯಾಮತಿ: ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎದುರಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ನಾಯ್ಕ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ದಾವಣಗೆರೆ (ಜೂ. 25): ನ್ಯಾಮತಿ (Nyamathi) ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎದುರಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ನಾಯ್ಕ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಶಿವಮೊಗ್ಗ ತಾಲೂಕು ನಾರಾಯಣಪುರ ಗ್ರಾಪಂ ಸದಸ್ಯ ಲೋಕೇಶ್ ನಾಯ್ಕ ಮತ್ತು ಚಿಕ್ಕ ದೊಡ್ಡಪ್ಪನ ಮಕ್ಕಳಾದ ಸುರೇಶ್ ನಾಯ್ಕರಿಗೆ ಜಮೀನು ವಿಚಾರದಲ್ಲಿ ಶುಕ್ರವಾರ ತಹಸೀಲ್ದಾರ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಇತ್ತು.
ಸುರೇಶ್ ನಾಯ್ಕ ಪರವಾಗಿ ಆದೇಶವಾದ ಹಿನ್ನೆಲೆಯಲ್ಲಿ ಲೋಕೇಶ್ ನಾಯ್ಕ ತಹಸೀಲ್ದಾರ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ. ನ್ಯಾಮತಿ ತಾಲೂಕು ಚಿನ್ನಿಕಟ್ಟೆಗ್ರಾಮದ ಪಕ್ಕದ ಲಕ್ಕಿನಕೊಪ್ಪ ಗ್ರಾಮದಲ್ಲಿ ಇವರ ಜಮೀನು ಇದ್ದು ಚಿಕ್ಕ ದೊಡ್ಡಪ್ಪನವರ ಅಣ್ಣ ತಮ್ಮಂದಿರ ಜಗಳದಲ್ಲಿ ನ್ಯಾಮತಿ ತಹಸೀಲ್ದಾರ್ ಕೋರ್ಟ್‌ನಲ್ಲಿ ಕೇಸು ಹಾಕಲಾಗಿತ್ತು. ವಿಷಕುಡಿದ ಲೋಕೇಶ್ ನಾಯ್ಕನನ್ನು ನ್ಯಾಮತಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ.