Asianet Suvarna News Asianet Suvarna News

ಬಿಎಂಟಿಸಿಯಿಂದ ಗುಡ್‌ ನ್ಯೂಸ್‌: ಇನ್ಮುಂದೆ ಸ್ಕ್ಯಾನಿಂಗ್‌ ಕೋಡ್‌ ಮೂಲಕ ಸಿಗುತ್ತೆ ಟಿಕೆಟ್‌

ಚಿಲ್ಲರೆಗಾಗಿ ಕಿರಿಕಿರಿ ಅನುಭವಿಸುತ್ತಿದ್ದ ಗ್ರಾಹಕರಿಗೆ ಬಿಎಂಟಿಸಿ ಗುಡ್‌ ನ್ಯೂಸ್‌ ನೀಡಿದ್ದು, ಯುಪಿಐನಿಂದ ಟಿಕೆಟ್‌ ಪಡೆಯಬಹುದಾಗಿದೆ.
 

ಬಿಎಂಟಿಸಿ ಬಸ್'ನಲ್ಲಿ ಇದೀಗ ಯುಪಿಐನಿಂದ ಸ್ಕ್ಯಾನಿಂಗ್‌ ಕೋಡ್‌ ಮೂಲಕ ಟಿಕೆಟ್‌ ಪಡೆಯಬಹುದಾಗಿದೆ. ಬಿಎಂಟಿಸಿ ಕಂಡಕ್ಟ್‌ರ್‌ ಕೈಗೆ ನೂತನ ಇಟಿಎಂ ಮಷಿನ್‌ ಬಂದಿದ್ದು, ಫೋನ್‌ ಪೇ, ಗೂಗಲ್‌ ಪೇ ಹಾಗೂ ಪೇಟಿಎಂ ಮಾಡಿ ಟಿಕೆಟ್‌ ಪಡೆಯಬಹುದು. ಬಿಎಂಟಿಸಿ ಎಂಟು ಸಾವಿರ ಇಟಿಎಂ ಮಷಿನ್‌ ಖರೀದಿಸಿದ್ದು, ಪ್ರಯಾಣಿಕರ ಹಿತದೃಷ್ಠಿ ಹಾಗೂ ನಿರ್ವಾಹಕರ ಕೆಲಸದ ವೇಗಕ್ಕಾಗಿ ಈ ಕಾರ್ಯ ಮಾಡಲಾಗಿದೆ. Pinelabs ಕಂಪನಿಯಿಂದ ಇಟಿಎಂ ಟಿಕೆಟ್‌ ಮಷಿನ್‌ ಖರೀದಿಸಿದ್ದು, ಒಂದು ವರ್ಷದ ಅವಧಿಗೆ ಬಾಡಿಗೆ ಆಧಾರದಲ್ಲಿ ಮಷಿನ್‌ ಪಡೆಯಲಾಗಿದೆ.

42 ಕ್ಯಾನ್ಸರ್‌ ಔಷಧಕ್ಕೆ ಬೆಲೆ ಮಿತಿ: ಕೇಂದ್ರದ ಕ್ರಮಕ್ಕೆ ಹೈಕೋರ್ಟ್‌ ಅಸ್ತು

Video Top Stories