Glucose For Crops : ರೋಗ ಪೀಡಿತ ಬೆಳೆಗಳಿಗೆ ಗ್ಲೂಕೋಸ್ : ಬಳ್ಳಾರಿ ರೈತರಿಂದ ಹೊಸ ಪ್ರಯೋಗ

ಅನಾರೋಗ್ಯದಿಂದ ಸುಸ್ತಾಗಿರುವ ವ್ಯಕ್ತಿಗೆ ಗ್ಲೂಕೋಸ್ ಕೊಡೋದು ಸಾಮಾನ್ಯ ಆದರೆ ಇಲ್ಲಿ ಬೆಳೆಗಳಿಗೆ ಗ್ಲೂಕೋಸ್ ನೀಡಲಾಗುತ್ತಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ಈ ರೀತಿ ಗ್ಲೂಕೋಸ್ ಸ್ಪ್ರೇ ಮಾಡಲಾತ್ತಿದೆ.

First Published Nov 30, 2021, 10:20 AM IST | Last Updated Nov 30, 2021, 10:20 AM IST

 ಬಳ್ಳಾರಿ (ನ.30): ಅನಾರೋಗ್ಯದಿಂದ ಸುಸ್ತಾಗಿರುವ ವ್ಯಕ್ತಿಗೆ ಗ್ಲೂಕೋಸ್ (Glucose) ಕೊಡೋದು ಸಾಮಾನ್ಯ ಆದರೆ ಇಲ್ಲಿ ಬೆಳೆಗಳಿಗೆ ಗ್ಲೂಕೋಸ್ ನೀಡಲಾಗುತ್ತಿದೆ. ಬೆಳೆಗಳನ್ನು (Crops)  ಉಳಿಸಿಕೊಳ್ಳಲು ಈ ರೀತಿ ಗ್ಲೂಕೋಸ್ ಸ್ಪ್ರೇ ಮಾಡಲಾತ್ತಿದೆ.  ರಾಜ್ಯದಲ್ಲಿ ಕೆಲ ದಿನಗಳಿಂದ ಭಾರಿ ಮಳೆ (Heavy Rain) ಸುರಿಯುತ್ತಿದ್ದು,ಅಕಾಲಿಕ ಮಳೆಯಿಂದ ಅವಾಂತರ  ಸೃಷ್ಟಿಯಾಗಿದೆ. ಇದರಿಂದ ಬೆಳೆಗಳು ಕೊಳೆಯುತ್ತಿದ್ದು, ಬೆಳೆಗಳನ್ನುಉಳಿಸಿಕೊಳ್ಳಲು ಗ್ಲೂಕೋಸ್ ಸ್ಪ್ರೇ ಮಾಡಲಾಗುತ್ತದೆ. 

Karnataka rain Effect : ಬೆಳೆ ಕಳೆದುಕೊಂಡ ರೈತರಿಗೆ ಅತಿ ಕಡಿಮೆ ಪರಿಹಾರ!

ಜಿಲ್ಲೆಯಲ್ಲಿ (Ballary) ಅಪಾರ ಪ್ರಮಾಣದ ಮಳೆಯಿಂದ ಮೆಣಸಿನ ಕಾಯಿ ಬೆಳೆ  ಕೊಳೆಯುತ್ತಿದ್ದು, ಜೊತೆಗೆ ವಿವಿಧ ರೋಗವೂ ಕಾಡುತ್ತಿದೆ. ಇದರ ನಿಯಂತ್ರಣದ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ.  ಆದರೆ ಇದರಿಂದ ರೈತರ ಬೆಳೆ ಕೈ ಹಿಡಿಯುವುದೋ  ಇಲ್ಲವೋ ಎನ್ನುವುದು ಮಾತ್ರ ಖಾತ್ರಿ ಇಲ್ಲ. ಒಟ್ಟಿನಲ್ಲಿ ತಮ್ಮ ಬೆಳೆ ಉಳಿಸಿಕೊಳ್ಳಲ ವಿವಿಧ ರೀತಿಯ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ.