
ಕೊಡಗಿಗೆ ಮತ್ತೆ ಕಾದಿದೆಯಾ ಭೂಕುಸಿತದ ಆತಂಕ..! ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಶಾಕಿಂಗ್ ವರದಿ !
ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿರುವ ಜಿಲ್ಲಾಡಳಿತ
2018ರಿಂದ ಮಡಿಕೇರಿಯಲ್ಲಿ ನಿರಂತರ ಭೂಕುಸಿತ ಪ್ರವಾಹ
ಪ್ರಾಣ ಹಾನಿ ಜತೆಗೆ ಬೀದಿಗೆ ಬಿದ್ದ ಸಾವಿರಾರು ಕುಟುಂಬಗಳು
ಕೊಡಗಿಗೆ ಮತ್ತೆ ಭೂಕುಸಿತದ ಆತಂಕ ಕಾಡುವ ಸಂಭವವಿದೆ. ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ(Geological Survey of India report) ಶಾಕಿಂಗ್ ವರದಿ ನೀಡಿದ್ದು, ಕೊಡಗಿನ(Kodagu) 70 ಸ್ಥಳಗಳಲ್ಲಿ ಭೂಕುಸಿತದ(Landslides) ಆತಂಕವಿದೆ ಎಂದು ವರದಿ ನೀಡಿದೆ. ಭೂಕುಸಿತದ ಜತೆಗೆ ಈ ಬಾರಿಯೂ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರವಾಹದ(Flood) ಮುನ್ಸೂಚನೆ ನೀಡಲಾಗಿದೆ. ಈ ಬಾರಿ ವಾಡಿಕೆಗಿಂತ 4 ಪರ್ಸೆಂಟ್ ಹೆಚ್ಚು ಮಳೆಯಾಗುವ(Rain) ಸಾಧ್ಯತೆ ಇದೆಯಂತೆ. ಇದೇ ತಿಂಗಳ ಅಂತ್ಯಕ್ಕೆ ಕೊಡಗಿಗೆ ಎನ್‌ಡಿಆರ್‌ಎಫ್ ತಂಡ ನಿಯೋಜನೆ ಮಾಡಲಾಗುವುದು. ಭೂಕುಸಿತ ಪ್ರವಾಹದ ಮುನ್ಸೂಚನೆ ಇರುವ ಸ್ಥಳಗಳ ಮೇಲೆ ನಿಗಾ ಇಡಲಾಗುವುದು. ತಾಲ್ಲೂಕು, ಹೋಬಳಿವಾರು ಅಧಿಕಾರಿಗಳ ತಂಡವನ್ನು ಜಿಲ್ಲಾಡಳಿತ ರಚಿಸಿದೆ. ಮತ್ತೆ ಭೂಕುಸಿತ, ಪ್ರವಾಹದ ಮಾಹಿತಿಯಿಂದ ಜನರಲ್ಲಿ ಭೀತಿ ಉಂಟಾಗಿದ್ದು, ರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಇದನ್ನೂ ವೀಕ್ಷಿಸಿ: ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ಪ್ರಧಾನಿಗೆ ಸಿದ್ದರಾಮಯ್ಯ 2ನೇ ಪತ್ರ..ಪಾಸ್‌ಪೋರ್ಟ್ ರದ್ದತಿಗೆ ಮತ್ತೆ ಮನವಿ