ಗದಗ: ನೆಟ್‌ವರ್ಕ್‌ ಸಮಸ್ಯೆ, ಸರಿಯಾಗಿ ಪಾಠ ಕೇಳಲಾಗದೆ SSLC ವಿದ್ಯಾರ್ಥಿಗಳ ಪರದಾಟ

- ಲಾಕ್‌ಡೌನ್ ಆದಾಗಿನಿಂದ ಮಕ್ಕಳಿಗೆ ಆನ್‌ಲೈನ್ ಮೂಲಕ ಕ್ಲಾಸ್ - ಗದಗದ ಕಬಲಾಯತಕಟ್ಟಿ ಗ್ರಾಮದ ಮಕ್ಕಳಿಗೆ ನೆಟ್‌ವರ್ಕ್ ಸಮಸ್ಯೆ- ಸರಿಯಾಗಿ ಪಾಠ ಕೇಳಲಾಗದೇ SSLC ವಿದ್ಯಾರ್ಥಿಗಳ ಪರದಾಟ 

Share this Video
  • FB
  • Linkdin
  • Whatsapp

ಗದಗ (ಜು. 02): ಲಾಕ್‌ಡೌನ್ ಆದಾಗಿನಿಂದ ಮಕ್ಕಳಿಗೆ ಆನ್‌ಲೈನ್ ಮೂಲಕ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ ಘೋಷಣೆಯಾಗಿದೆ. ಆನ್‌ಲೈನ್‌ನಲ್ಲೇ ಪಾಠ ಕೇಳಿ ಮಕ್ಕಳು ತಯಾರಾಗುತ್ತಿದ್ದಾರೆ.

ಆದರೆ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳು ನೆಟ್‌ವರ್ಕ್‌ಗಾಗಿ ಪರದಾಡುತ್ತಿದ್ದಾರೆ. ಇಲ್ಲಿನ ಕಬಲಾಯತಕಟ್ಟಿ ಗ್ರಾಮದ ಮಕ್ಕಳು ನೆಟ್‌ವರ್ಕ್‌ಗಾಗಿ ಪರದಾಡುತ್ತಿದ್ದಾರೆ. ಸಿಗುವ ಅಲ್ಪಸ್ವಲ್ಪ ನೆಟ್‌ವರ್ಕ್‌ಗಾಗಿ ಗುಡ್ಡದ ಮೇಲೆರಿ, ಮರ ಏರಿ ಕುಳಿತುಕೊಳ್ಳಬೇಕಾಗಿದೆ. ನೆಟ್‌ವರ್ಕ್ ಸಮಸ್ಯೆ ಬಗ್ಗೆ ಗ್ರಾಮಸ್ಥರು ಪ್ರಧಾನಿ ಮೋದಿಗೂ ಪತ್ರೆ ಬರೆದಿದ್ದಾರೆ. 

Related Video