ಮಹಿಳೆಯರ ಸ್ಯಾನಿಟರಿ ಪ್ಯಾಡ್ ವಿಚಾರಕ್ಕೆ ಗಲಾಟೆ, ಮೆಡಿಕಲ್ ಶಾಪ್ ಸಿಬ್ಬಂದಿ ಮೇಲೆ ಹಲ್ಲೆ!

ಗದಗ ನಗರದ ಜಿಮ್ಸ್ ಆಸ್ಪತ್ರೆಯ ಬಳಿಯ ಮೆಡಿಕಲ್ ಶಾಪ್ ಬಳಿ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಬದಲಾವಣೆ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿದೆ.

Share this Video
  • FB
  • Linkdin
  • Whatsapp

ಗದಗ (ಜೂ.06): ಗದಗ ನಗರದ ಜಿಮ್ಸ್ ಆಸ್ಪತ್ರೆಯ ಬಳಿಯ ಮೆಡಿಕಲ್ ಶಾಪ್ ಬಳಿ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಬದಲಾವಣೆ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿದೆ. ನೀಲಕಂಠ ಮಾಳಗಿಮನಿ ಎಂಬ ವ್ಯಕ್ತಿ ಸ್ಯಾನಿಟರಿ ಪ್ಯಾಡ್ ಖರೀದಿ ಮಾಡಿ ಕೆಲವೇ ನಿಮಿಷದಲ್ಲಿ ರಿಪ್ಲೇಸ್ ಮಾಡಿಕೊಡಿ ಎಂದು ಮೆಡಿಕಲ್ ಶಾಪ್‌ಗೆ ವಾಪಸ್ ಬಮದು ಕೇಳಿದ್ದಾರೆ. ಆದರೆ, ನಾವು ಕೊಟ್ಟ ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಒಪನ್ ಮಾಡಿದ್ದೀರಿ, ಆದ್ದರಿಂದ ಇದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಮೆಡಿಕಲ್ ಶಾಪ್ ಸಿಬ್ಬಂದಿ ಭೀಮನಗೌಡ ದಾನಪ್ಪಗೌಡರ್ ಹೇಳಿದ್ದಾರೆ. ಇದಕ್ಕೊಪ್ಪದಿದ್ದಾಗ ಇಬ್ಬರ ನಡುವೆಯೂ ವಾಗ್ವಾದ ನಡೆದಿದೆ.

ಬದಲಿ ಸ್ಯಾನಿಟರಿ ಪ್ಯಾಡ್ ಕೊಡದ ಮೆಡಿಕಲ್ ಶಾಪ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ಹೋಗಿದ್ದ ನೀಲಕಂಠ ಎನ್ನುವವರು ತಮ್ಮ ಪರಿಚಯಸ್ಥರನ್ನ ಕರೆದುಕೊಂಡು ಪುನಃ ಮೆಡಿಕಲ್ ಶಾಪ್‌ ಬಳಿಗೆ ಬಂದು ಗಲಾಟೆ ಆರಂಭಿಸಿದ್ದಾರೆ. ಆಗ ನೀಲಗಂಠ ಗ್ಯಾಂಗ್ ನಿಂದ ಮೆಡಿಲ್ ಶಾಪ್ ಮೇಲೆ ಕಲ್ಲು ತೂರಾಟ ಮಾಡಿ ಗಲಾಟೆ ಮಾಡಲಾಗಿದೆ. ದುಷ್ಕರ್ಮಿಗಳ ಗುಂಪು ಗಲಾಟೆಯ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.

Related Video