Asianet Suvarna News Asianet Suvarna News

ಅಧಿಕಾರಿಗಳ ಬೇಜವಾಬ್ದಾರಿ; ನೆರೆ ಸಂತ್ರಸ್ಥರು ಹೈರಾಣು

ಅಧಿಕಾರಿಗಳ ಬೇಜವ್ದಾರಿಗೆ ನೆರೆ ಸಂತ್ರಸ್ಥರು ಹೈರಾಣಾಗಿ ಹೋಗಿದ್ದಾರೆ. ನೆರೆ ಪ್ಯಾಕೇಜ್ ಈಗ ಕೊರೋನಾ ಸಂಕಷ್ಟದಲ್ಲಿದ್ದವರಿಗಾದರೂ ನೀಡಬಹುದಾಗಿತ್ತು. ಆದರೆ ಅಧಿಕಾರಿಗಳು ಮಾತ್ರ ಈ ಕಡೆ ತಲೆ ಹಾಕಿಲ್ಲ. ಕಣ್ಣಿದ್ದು ಕುರುಡರಂತೆ ವರ್ತಿಸಿದ್ದಾರೆ ಅಧಿಕಾರಿಗಳು.
 
ಗದಗ(ಜೂ.13): ಕೊರೋನಾ ಸಂಕಷ್ಟದ ಕಾಲದಲ್ಲೂ ಅಧಿಕಾರಿಗಳ ಬೇಜಬ್ದಾರಿ ಮುಂದುವರೆದಿದೆ. ನೆರೆ ಸಂತ್ರಸ್ಥರಿಗೆ ತಲುಪಬೇಕಾಗಿದ್ದ 380ಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ಸುಮ್ಮನೆ ಪಶು ಆಸ್ಪತ್ರೆಯಲ್ಲೇ ಬಿದ್ದು ಕೊಳೆಯುತ್ತಿವೆ. ಇದೆಲ್ಲಾ ನಡೆದಿರುವುದು ಗದಗ ಜಿಲ್ಲೆಯ ರೋಣಾ ತಾಲೂಕಿನ ಮೆಣಸಿಗಿ ನವಗ್ರಾಮದಲ್ಲಿ.

ಅಧಿಕಾರಿಗಳ ಬೇಜವ್ದಾರಿಗೆ ನೆರೆ ಸಂತ್ರಸ್ಥರು ಹೈರಾಣಾಗಿ ಹೋಗಿದ್ದಾರೆ. ನೆರೆ ಪ್ಯಾಕೇಜ್ ಈಗ ಕೊರೋನಾ ಸಂಕಷ್ಟದಲ್ಲಿದ್ದವರಿಗಾದರೂ ನೀಡಬಹುದಾಗಿತ್ತು. ಆದರೆ ಅಧಿಕಾರಿಗಳು ಮಾತ್ರ ಈ ಕಡೆ ತಲೆ ಹಾಕಿಲ್ಲ. ಕಣ್ಣಿದ್ದು ಕುರುಡರಂತೆ ವರ್ತಿಸಿದ್ದಾರೆ ಅಧಿಕಾರಿಗಳು.

ವಿಜಯಪುರ: ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ 9 ಲಕ್ಷ ದೋಚಿದ ಖದೀಮರು

ಕಳೆದ ವರ್ಷ ಬೆಣ್ಣೆಹಾಳ ಮಲಪ್ರಭ ನದಿಯ ಪ್ರವಾಹಕ್ಕೆ ರೋಣಾ ಭಾಗದ ಜನ ನಲುಗಿ ಹೋಗಿದ್ದರು. ಸರ್ಕಾರ ನೀಡಿದ್ದ ಆಹಾರದ ಕಿಟ್ ಜನರಿಗೆ ತಲುಪಿಸಲು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories